ಶನಿವಾರ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ತುಮಕೂರು ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು-ಮಂಗಳೂರು ಪ್ಯಾಸೆಂಜರ್ ರೈಲನ್ನು ಸುಬ್ರಮಣ್ಯ ರೋಡ್ ನಿಲ್ದಾಣದವರೆಗೆ ವಿಸ್ತರಣೆ ಮಾಡಲು ಹಸಿರು ನಿಶಾನೆ ತೋರಿಸಿದರು.
ಈ ವಿಸ್ತೃತ ರೈಲು ಮಾರ್ಗ ಸೇವೆಯಿಂದ ಮಂಗಳೂರು ನಗರದಿಂದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಚಾರ ನಡೆಸುವ ಸಾವಿರಾರು ಭಕ್ತರಿಗೆ ಅನುಕೂಲವಾಗಲಿದೆ. ಅಲ್ಲದೇ ಪ್ರತಿದಿನ ಈ ಮಾರ್ಗದಲ್ಲಿ ಸಂಚಾರ ನಡೆಸುವ ನೂರಾರು ಪ್ರಯಾಣಿಕರಿಗೂ ಸಹಾಯಕವಾಗಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ರೈಲಿನ ವೇಳಾಪಟ್ಟಿಯು ಈ ಕೆಳಗಿನಂತಿದೆ.
1. ರೈಲು ನಂಬರ್ 56625 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು-ಸುಬ್ರಮಣ್ಯ ರೋಡ್ ರೈಲು. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮುಂಜಾನೆ 4 ಗಂಟೆಗೆ ಹೊರಡಲಿದೆ. 5.18ಕ್ಕೆ ಕಬಕ ಪುತ್ತೂರು (2 ನಿಮಿಷ ನಿಲುಗಡೆ). ಬೆಳಗ್ಗೆ 6.30ಕ್ಕೆ ಸುಬ್ರಮಣ್ಯ ರೋಡ್ ತಲುಪಲಿದೆ.
2. ಸುಬ್ರಹ್ಮಣ್ಯ ರೋಡ್-ಮಂಗಳೂರು ಸೆಂಟ್ರಲ್ ನಡುವೆ ರೈಲು ಸಂಖ್ಯೆ 56626 ಸಂಚಾರವನ್ನು ನಡೆಸಲಿದೆ. ಈ ರೈಲು ಬೆಳಗ್ಗೆ 7 ಗಂಟೆಗೆ ಸುಬ್ರಮಣ್ಯ ರೋಡ್‌ನಿಂದ ಹೊರಟು 7.48ಕ್ಕೆ ಕಬಕ-ಪುತ್ತೂರು ತಲುಪಲಿದೆ (2 ನಿಮಿಷ ನಿಲುಗಡೆ). ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
3. ರೈಲು ಸಂಖ್ಯೆ 56627 ಮಂಗಳೂರು ಸೆಂಟ್ರಲ್‌ನಿಂದ ಸಂಜೆ 5.45ಕ್ಕೆ ಹೊರಡಲಿದ್ದು, 7.30ಕ್ಕೆ ಕಬಕ ಪುತ್ತೂರು ತಲುಪಲಿದೆ. ರಾತ್ರಿ 8.10ಕ್ಕೆ ಸುಬ್ರಮಣ್ಯ ರೋಡ್‌ಗೆ ತಲುಪಲಿದೆ. ರೈಲು ಸಂಖ್ಯೆ 56628 ಸುಬ್ರಮಣ್ಯ ರೋಡ್‌ನಿಂದ ರಾತ್ರಿ 8.40ಕ್ಕೆ ಹೊರಟು 9.28ಕ್ಕೆ ಕಬಕ ಪುತ್ತೂರು ತಲುಪಲಿದೆ. 11.10ಕ್ಕೆ ಮಂಗಳೂರು ಸೆಂಟ್ರಲ್‌ಗೆ ತಲುಪಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಜನರ 18 ವರ್ಷಗಳ ಬೇಡಿಕೆ ಇದೀಗ ಸಂಸದ ಬ್ರಿಜೇಶ್ ಚೌಟ ಅವರ ಮನವಿಗೆ ಸ್ಪಂದಿಸಿ ಅಂತಿಮವಾಗಿ ರೈಲು ಸುಬ್ರಹ್ಮಣ್ಯದವರಿಗೆ ವಿಸ್ತರಣೆಯಾಗಿ ಸಂಚರಿಸುವಂತಾಗಿದೆ.
0 Comments