ಸಂಜೀವಿನಿ ಆರೋಗ್ಯ ಯೋಜನೆ ಪರಿಷ್ಕರಣೆ..!!

ರಾಜ್ಯ ಸರ್ಕಾರ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೀಡುವ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯಾದ "ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ"(ಕೆಎಎಸ್ಎಸ್) ಅಡಿಯಲ್ಲಿ ಆರಂಭದ ಅಂದರೆ ಮೊದಲನೇ ಹಂತದ ಒಳರೋಗಿ ವಿಭಾಗಕ್ಕೆ ಮಾತ್ರ ಸೇವಾ ಸೌಲಭ್ಯ ಒದಗಿಸಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ.
ಹೊರರೋಗಿ ಚಿಕಿತ್ಸಾ ವಿಭಾಗ (ಒಪಿಟಿ), ಆಯುಷ್ ಚಿಕಿತ್ಸಾ ವಿಧಾನಗಳನ್ನು ಯೋಜನೆಯ ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು. ಅಲ್ಲದೆ ಕೆಎಎಸ್ಎಸ್ ಚಿಕಿತ್ಸಾ ವಿಧಾನಗಳಲ್ಲಿ ಒಳಗೊಂಡ ಡೇ ಕೇರ್ ಚಿಕಿತ್ಸೆಗಳನ್ನು ಯೋಜನೆ ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಪೂರ್ಣ ಪ್ರಮಾಣದಲ್ಲಿ ಯೋಜನೆ ಜಾರಿಯಾದ ಬಳಿಕ ಹೊರರೋಗಿ ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರ, ವೈದ್ಯಕೀಯ ತಪಾಸಣೆ, ವಾರ್ಷಿಕ ಆರೋಗ್ಯ ತಪಾಸಣೆ ಮುಂತಾದ ಆರೋಗ್ಯ ಸೇವಾ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದೆ. ಕೆಎಎಸ್ ಎಸ್ ವ್ಯಾಪ್ತಿಯಲ್ಲಿ 2000 ಚಿಕಿತ್ಸಾ ವಿಧಾನಗಳು ಒಳಗೊಂಡಿದ್ದು, ಮಾಸ್ಟರ್ ಪ್ಯಾಕೇಜ್ ದರವನ್ನು 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ'ಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದೆ.

Post a Comment

0 Comments