ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕಡಿಮೆಯಾದಾಗ ನೀರಿನ ಕೊರತೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಖಾಸಗಿ ಟ್ಯಾಂಕರ್ ಗಳು ತಮ್ಮ ದರವನ್ನು ಹೆಚ್ಚಿಸುವುದರಿಂದ ಜನಸಾಮಾನ್ಯರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಬಿಐಎಸ್ ಪ್ರಮಾಣೀಕೃತ ಶುದ್ಧ ಕುಡಿಯುವ ನೀರನ್ನು ಜನರ ಮನೆ ಬಾಗಿಲಿಗೆ ತಲುಪಿಸುವಂತಹ ವಿನೂತನ ಯೋಜನೆಯಾಗಿರುವ ಸಂಚಾರಿ ಕಾವೇರಿ-ಕಾವೇರಿ ಆನ್ ವೀಲ್ಸ್ ಅನ್ನು ಅನುಷ್ಠಾನಗೊಳಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಈಗಾಗಲೇ ಈ ಯೋಜನೆಗಾಗಿ ಆಪ್ ಮತ್ತು ವೆಬ್ಸೈಟ್ ಅನ್ನು ರೂಪಿಸಲಾಗಿದೆ. ಈ ಯೋಜನೆಗೆ ಡಿಸಿಎಂ ಡಿಕೆ ಶಿವಕುಮಾರ್ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸೇವೆಯಲ್ಲಿ ಜನರು ತಮಗೆ ಅಗತ್ಯವಿರುವಷ್ಟು ನೀರನ್ನು ಅತ್ಯಂತ ಸುಲಭ ವಿಧಾನದಲ್ಲಿ ಬುಕ್ ಮಾಡಲು ಅನುವು ಮಾಡಿಕೊಡಲಾಗಿದೆ. ಕಾವೇರಿ ಕನೆಕ್ಟ್ ಸೆಂಟರ್ ಗಳಿಂದ ಬಿಐಎಸ್ ಪ್ರಮಾಣಿಕೃತ ಶುದ್ಧ ಕುಡಿಯುವ ನೀರನ್ನು ಮಳೆ ಬಾಗಿಲಿಗೆ ತಲುಪಿಸುವುದು ಈ ಯೋಜನೆಯ ಉದ್ದೇಶ. ಗ್ರಾಹಕರು ಆನ್ಲೈನ್ ಫ್ಲಾಟ್ ಫಾರಂ ಮೂಲಕ ಹಣ ಪಾವತಿಸಿ ಟ್ಯಾಂಕರ್ ಬುಕ್ ಮಾಡಲು ಅವಕಾಶ ನೀಡಲಾಗಿದೆ. ಇದೊಂದು ವಿಶೇಷ ಮತ್ತು ವಿನೂತನ ಯೋಜನೆಯಾಗಿದ್ದು, ದೇಶದ ಯಾವುದೇ ನಗರಗಳಲ್ಲಿ ಯಾವುದೇ ಜಲ ಮಂಡಳಿ ಇದುವರೆಗೂ ಆರಂಭಿಸದೇ ಇರುವಂತಹ ಹೊಸ ಯೋಜನೆ ಇದಾಗಿದೆ.
ಲಭ್ಯವಿರುವಂತಹ ನೀರನ್ನು ಅಗತ್ಯವಿರುವ ಜನರಿಗೆ ಸರಬರಾಜು ಮಾಡುವ ವ್ಯವಸ್ಥೆ ಇದಾಗಿದೆ. ಖಾಸಗಿ ಟ್ಯಾಂಕರ್ ಗಳು ಪೂರೈಸುವಂತಹ ನೀರಿನ ಗುಣಮಟ್ಟ, ಅವುಗಳ ಅಳತೆಯಲ್ಲಿ ವ್ಯತ್ಯಾಸ, ಬೇಡಿಕೆ ಹೆಚ್ಚಾದಾಗ ದರ ಹೆಚ್ಚಳ ಈ ಎಲ್ಲಾ ಸಮಸ್ಯೆಗಳನ್ನು ಏಕಕಾಲದಲ್ಲಿ ಪರಿಹರಿಸುವ ಯೋಜನೆ ಇದಾಗಿದೆ.
ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಈಗಾಗಲೇ ಟ್ಯಾಂಕರ್ ಗಳು ದರ ಏರಿಕೆ ಮಾಡಿರುವ ಬಗ್ಗೆ ವರದಿಗಳು ಬಂದಿದ್ದು ಕೆಲವು ಕಡೆಗಳಲ್ಲಿ ಟ್ಯಾಂಕರ್ ಗಳಿಗೆ ಬೇಡಿಕೆ ಇಲ್ಲದ ಬಗ್ಗೆ ಮಾಹಿತಿಗಳಿವೆ. ಬೆಂಗಳೂರು ಜಲ ಮಂಡಳಿಯ ಬಳಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಲಭ್ಯತೆ ಇದೆ. 110 ಹಳ್ಳಿಗಳ ವ್ಯಾಪ್ತಿಯಲ್ಲಿ ಟ್ಯಾಕ್ಟರ್ ಗಳ ಮೇಲೆ ಅವಲಂಬಿತರಾಗಿರುವ ಜನರಿಗೆ ಉತ್ತಮ ನೀರನ್ನು ಒದಗಿಸುವುದು ಈ ಯೋಜನೆಯ ಗುರಿ. ಈ ನಿಟ್ಟಿನಲ್ಲಿ ಖಾಸಗಿ ಟ್ಯಾಂಕರ್ ಗಳ ಮಾಲೀಕರು ತಮ್ಮ ಸಂಚಾರಿ ಕಾವೇರಿ ಪ್ಲಾಟ್ ಫಾರಂನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸೇವೆಯನ್ನು ಒದಗಿಸಲು ಖಾಸಗಿ ಟ್ಯಾಂಕರಿನವರು ಜಲಮಂಡಳಿಗೆ ತಮ್ಮ ಟ್ಯಾಂಕರ್ ಗಳನ್ನು ಬಾಡಿಗೆ ಆಧಾರದಲ್ಲಿ ನೀಡಬಹುದಾಗಿದೆ. ಸದರಿ ಯೋಜನೆಯಲ್ಲಿ ಜಲ ಮಂಡಳಿಗೆ ಬಾಡಿಗೆ ಆಧಾರದಲ್ಲಿ ಟ್ಯಾಂಕರ್ ನೀಡಲು ಇಚ್ಚಿಸುವ ಟ್ಯಾಂಕರ್ ಮಾಲೀಕರು, ಏನು ಗೊತ್ತಾಯ್ತಾ ನೇರವಾಗಿ ಫಾರಂ ಗಳಲ್ಲಿ ನೋಂದಣಿ ಮಾಡಿಕೊಂಡು ಸೇವೆಯನ್ನು ಒದಗಿಸಬಹುದಾಗಿದೆ. ಏಪ್ರಿಲ್ 10ರವರೆಗೆ ಟ್ಯಾಂಕರ್ ಗಳು ನೋಂದಣಿ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಟ್ಯಾಂಕರ್ ನೋಂದಣಿಗೆ https://bwssb.karnataka.gov.in/ ಜಾಲತಾಣದಲ್ಲಿ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಸನತ್ ಕುಮಾರ್ ವಿ 990188838, 9901888338 ಸಂಪರ್ಕಿಸಬಹುದು.
0 Comments