ಕರ್ನಾಟಕದಾದ್ಯಂತ 15,391 ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ:"ಪೋಷಣ್" ಅಂಕಿ ಅಂಶ..!!

ಸರ್ಕಾರವು ಮಕ್ಕಳ ಆರೋಗ್ಯ ದೃಷ್ಟಿಯಿಂದ ಹಲವಾರು ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆಯಾಗದಂತೆ ಆಹಾರ ಪೂರೈಕೆಯನ್ನು ಕೂಡ ಸರ್ಕಾರವು ಮಾಡುತ್ತಿದೆ. ಆದರೂ ಪುಟಾಣಿ ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದ್ದು, ಮಕ್ಕಳ ಆರೋಗ್ಯದ ಕಡೆ ಎಲ್ಲರೂ ಗಮನಹರಿಸಬೇಕಾಗಿದೆ.. 
ಸರಕಾರವು ಅಂಗನವಾಡಿ ಕೇಂದ್ರ, ಆಶಾ ಕಾರ್ಯಕರ್ತೆಯರ ಮೂಲಕ ಪುಟಾಣಿ ಮಕ್ಕಳ ಆರೋಗ್ಯ ತಪಾಸಣೆಯನ್ನು ಆಗಾಗ ಮಾಡುತ್ತಿದ್ದು, 
ಪೋಷಣ್ ಅಪ್ಲಿಕೇಶನ್ ಮೂಲಕ ಮಕ್ಕಳ ತೂಕ ಮತ್ತು ಎತ್ತರಗಳ ಆರೋಗ್ಯ ಕುರಿತ ಮಾಹಿತಿಯನ್ನು ದಾಖಲಿಸುತ್ತಿದೆ. 2025ರ ಫೆಬ್ರವರಿ ಫೆಬ್ರವರಿ ಅಂತ್ಯದೊಳಗೆ ಬಂದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಸುಮಾರು 15,391 ಮಕ್ಕಳು ತೀವ್ರ ಪೌಷ್ಟಿಕತೆಯಿಂದ ಬಳಲುತ್ತಿರುವುದು ವರದಿಯಾಗಿದೆ...!!

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇತೃತ್ವದಲ್ಲಿ ಪ್ರತಿ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯ ತೂಕ ಎತ್ತರ ಇವೆಲ್ಲದರ ತಪಾಸಣೆಯನ್ನು ಕಾಲಕಾಲಕ್ಕೆ ಮಾಡುತ್ತಿದ್ದು ಪೋಷಣ್ ಟ್ರ್ಯಾಕರ್ ನಲ್ಲಿ ಇವೆಲ್ಲವನ್ನು ದಾಖಲಿಸಲಾಗುತ್ತಿದೆ. ಹೀಗೆ ಫೆಬ್ರವರಿ ಕೊನೆಯ ವೇಳೆಗೆ ದಾಖಲಾದ ಪೋಷಣ್ ಟ್ರ್ಯಾಕರ್ ನಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಮಕ್ಕಳಲ್ಲಿ ಅಪೌಷ್ಟಿಕತೆ ಕೊರತೆ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. 

ಇಲ್ಲಿಯವರೆಗೆ ಒಟ್ಟು 32,98,772 ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಲಾಗಿದೆ. ಇದರಲ್ಲಿ 1,04,638 ಮಕ್ಕಳು ಸಾಧಾರಣ ಅಪೌಷ್ಟಿಕತೆ ಮತ್ತು 15,391 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಬಹಿರಂಗವಾಗಿದೆ. ಆದರೆ 2024ರ ಮಾರ್ಚ್ ಅಂತ್ಯದ ಅಂಕಿ ಅಂಶಕ್ಕೆ ಹೋಲಿಸಿದರೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. 2024ರ ಮಾರ್ಚ್ ತಿಂಗಳ ಅಂತ್ಯಕ್ಕೆ 77,482 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ವರದಿಯಾಗಿತ್ತು. 


ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳ ಸದೃಢ ಆರೋಗ್ಯಕ್ಕಾಗಿ ಹಲವಾರು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿರುವುದರಿಂದ ಮಹತ್ತರವಾದ ಬದಲಾವಣೆಯಾಗುತ್ತಿದ್ದು ಈ ವರ್ಷ ಅಪೌಷ್ಟಿಕತೆಯ ಮಟ್ಟ ತೀವ್ರಗತಿಯಲ್ಲಿ ಇಳಿಕೆ ಯಾಗಿರುವುದು ಸಂತಸದ ವಿಚಾರ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಎತ್ತರ ಮತ್ತು ತೂಕವನ್ನು ಪ್ರತಿ ತಿಂಗಳು ಅಳತೆ ಮಾಡಿ ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸಿರುವ ಪೋಷಣ್ ಟ್ರ್ಯಾಕರ್ ನಲ್ಲಿ ದಾಖಲಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಆಧಾರದ ಮೇಲೆ ಮಕ್ಕಳ ಅಪೌಷ್ಟಿಕತೆ ಮಟ್ಟವನ್ನು ಗುರುತಿಸಲಾಗುತ್ತದೆ. ಬಳಿಕ ಅಂಗನವಾಡಿ ಕೇಂದ್ರಗಳ ಮೂಲಕ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೂರಕವಾದ ಪೌಷ್ಟಿಕ ಆಹಾರಗಳನ್ನು ಒದಗಿಸಿ ಅವರನ್ನು ಸಾಮಾನ್ಯ ಆರೋಗ್ಯ ಸ್ಥಿತಿಗೆ ತರುವ ಪ್ರಯತ್ನವನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆಯು ನಿರಂತರವಾಗಿ ಮುಂದುವರೆಯುತ್ತಿರುತ್ತದೆ. ತೀವ್ರ ಅಪೌಷ್ಟಿಕತೆ ಕಂಡು ಬಂದ ಮಕ್ಕಳ ಬಗ್ಗೆ ವಿಶೇಷ ನಿಗ ವಹಿಸಿ 15 ದಿನಗಳಿಗೊಮ್ಮೆ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವ ಕೆಲಸ ಕೂಡ ನಡೆಯುತ್ತದೆ. 

ಮಕ್ಕಳಲ್ಲಿನ ತೀವ್ರವಾದ ಅಪೌಷ್ಟಿಕತೆಯ ನಿವಾರಣೆಗಾಗಿ ಸರಕಾರವು ಹಲವಾರು ಸುಧಾರಣಾ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕೆಲಸ ನಿರ್ವಹಿಸುತ್ತಿದೆ. ಇದಕ್ಕಾಗಿ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮ, ಕ್ಷೀರ ಭಾಗ್ಯ ಯೋಜನೆ, ಸೃಷ್ಟಿ ಯೋಜನೆ, ಪ್ರಧಾನಮಂತ್ರಿ ಮಾತ್ರ ವಂದನ ಯೋಜನೆ, ಇತ್ಯಾದಿ ಯೋಜನೆಗಳನ್ನು ಜಾರಿಗೆ ತಂದಿದ್ದು ಇವು ಸರಿಯಾಗಿ ತಲುಪುವಂತೆ ಮಾಡುವುದು ಇಲಾಖೆಯ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಕೂಡ ಮಕ್ಕಳಿಗಾಗಿ ಇರುವ ಯೋಜನೆಗಳ ಕುರಿತಂತೆ ತಿಳಿದುಕೊಂಡು ಅವುಗಳನ್ನು ಅನುಸರಿಸುವುದು ಅತ್ಯಗತ್ಯವಾಗಿದೆ. ತಮ್ಮ ಮಕ್ಕಳಲ್ಲಿ ಏನೇ ಆರೋಗ್ಯ ಸಮಸ್ಯೆ ಕಂಡುಬಂದರೂ ಪೋಷಕರು ತಕ್ಷಣ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ ವೈದ್ಯರಿಂದ ಸೂಕ್ತವಾದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು. ಮಕ್ಕಳು ಊಟ ಮಾಡದೆ ಇರುವುದು ವಯಸ್ಸಿಗಿಂತ ಕಡಿಮೆ ತೂಕ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯವಾಗಿದೆ.

ಹೆಚ್ಚು ಅಪೌಷ್ಟಿಕ ಮಕ್ಕಳಿರುವ ಮೊದಲ ಹತ್ತು ಜಿಲ್ಲೆಗಳು ಮತ್ತು ಮಕ್ಕಳ ಸಂಖ್ಯೆ:
1. ಕಲಬುರ್ಗಿ-2,956
2. ರಾಯಚೂರು-2,422
3. ವಿಜಯನಗರ- 1,151
4. ಬೀದರ್-1,039
5. ಬೆಳಗಾವಿ-769
6. ಬಳ್ಳಾರಿ-775
7. ಹಾಸನ-590
8. ಮೈಸೂರು- 547
9. ಯಾದಗಿರಿ-543
10. ಕೊಪ್ಪಳ-466

Post a Comment

0 Comments