"ನನ್ನ ಜೀವನ ಭಾರತದ ಕೋಟ್ಯಂತರ ತಾಯಂದಿರು-ಸಹೋದರಿಯರ ಆಶೀರ್ವಾದದ ಫಲ. ಹಾಗಾಗಿ ನಾನು ವಿಶ್ವದಲ್ಲೇ ಅತ್ಯಂತ ಸಿರಿವಂತ. ತಾಯಂದಿರು ಸಹೋದರಿಯರ ಆಶೀರ್ವಾದವೇ ನನ್ನ ದೊಡ್ಡ ಶಕ್ತಿ.ಮಹಿಳೆಯರನ್ನು ಗೌರವಿಸುವುದೇ ಅಭಿವೃದ್ಧಿ ಹೊಂದಿದ ಭಾರತಕ್ಕೆ ಮೊದಲ ಹೆಜ್ಜೆ"ಎಂದು ಪ್ರಧಾನಿ ನರೇಂದ್ರ ಮೋದಿಯವರು ಭಾವುಕರಾಗಿ ಲಕ್ಪತಿ ಬೀದಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಈ ಕಾರ್ಯಕ್ರಮದ ಅಂಗವಾಗಿ ವನಸಿ ಬೋರ್ಸಿ ಗ್ರಾಮದಲ್ಲಿ 25,000ಕ್ಕೂ ಅಧಿಕ ಸ್ವಸಹಾಯ ಗುಂಪುಗಳ 2.50 ಲಕ್ಷಕ್ಕೂ ಹೆಚ್ಚು ಮಹಿಳಾ ಸದಸ್ಯರಿಗೆ ಕೇಂದ್ರ ಸರಕಾರದ 450 ಕೋಟಿ ರೂಪಾಯಿಗಳ ಆರ್ಥಿಕ ನೆರವನ್ನು ವಿತರಿಸಿದರು. ತನ್ನ ತವರು ರಾಜ್ಯ ಗುಜರಾತಿಗೆ 2587 ಕೋಟಿ ರೂಪಾಯಿಗಳ ವಿಶೇಷ ಯೋಜನೆಗಳಿಗೆ ಚಾಲನೆ ನೀಡಿದರು. ಗುಜರಾತ್ ಸಫಲ್ ಮತ್ತು ಗುಜರಾತ್ ಮೈತ್ರಿ ಯೋಜನೆಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು. ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಮೂಲಕ ಅವರಿಗೆ ಗೌರವ ನೀಡಿದ್ದೇವೆ ಎಂದು ಹೇಳಿದ ಪ್ರಧಾನಿ, ದೇಶದ ಕೋಟ್ಯಂತರ ಮಹಿಳೆಯರು ಜನಧನ್ ಬ್ಯಾಂಕ್ ಖಾತೆ ತೆರೆಯುವ ಮೂಲಕ ಸಬಲೀಕರಣಗೊಂಡರು. ಅಷ್ಟೇ ಅಲ್ಲದೆ ಉಜ್ವಲ ಯೋಜನೆಯಲ್ಲಿ ಆರೋಗ್ಯ ಸೌಲಭ್ಯವನ್ನು ನೀಡಲಾಗಿದೆ. ಹಿಂದೆ 12:30 ಅಷ್ಟೇ ಇದ್ದ ಹೆರಿಗೆ ರಜೆಯನ್ನು ನಾವು 26 ವಾರಗಳಿಗೆ ಹೆಚ್ಚಿಸಿದೆವು ಎಂದು ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ.
0 Comments