ರಾಜ್ಯ ಬಜೆಟ್ನಲ್ಲಿ ಮಾಧ್ಯಮ ಸಂಜೀವಿನಿ ಯೋಜನೆ ಘೋಷಿಸಿ ಪತ್ರಕರ್ತರಿಗೆ ಸಿಹಿಸುದ್ದಿ ನೀಡಿದ ಸರ್ಕಾರ

2025-26ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಾನ್ಯತೆ ಪಡೆದಿರುವ ಪತ್ರಕರ್ತರಿಗೆ ಮಾಧ್ಯಮ ಸಂಜೀವಿನಿ ಯೋಜನೆ ಘೋಷಿಸುವುದರ ಮೂಲಕ ಸಿಹಿ ಸುದ್ಧಿ ನೀಡಿದ್ದಾರೆ.
ತನ್ನ ರಾಜಕೀಯ ಜೀವನದ ಹದಿನಾರನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಯವರು, ರಾಜ್ಯದಲ್ಲಿ ಮಾಧ್ಯಮ ಮಾನ್ಯತೆ ಹೊಂದಿರುವ ಒಟ್ಟು 2,500 ಪತ್ರಕರ್ತರು ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ಐದು ಲಕ್ಷದವರೆಗೆ ನಗದುರಹಿತ ಚಿಕಿತ್ಸೆಗಾಗಿ ಮಾಧ್ಯಮ ಸಂಜೀವಿನಿ ಯೋಜನೆಯನ್ನು ಅನುಷ್ಠಾನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. 

ಅಷ್ಟೇ ಅಲ್ಲದೆ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಪ್ರಸ್ತುತ ನೀಡುತ್ತಿರುವ 12 ಸಾವಿರ ರೂಪಾಯಿ ಮಾಶಾಸನವನ್ನು ಹದಿನೈದು ಸಾವಿರ ರೂಪಾಯಿಗಳಿಗೆ ಹೆಚ್ಚಿಸುವುದಾಗಿ ಹಾಗೂ ಕುಟುಂಬ ಸದಸ್ಯರ ಮಾಶಾಸನವನ್ನು 6 ಸಾವಿರದಿಂದ ಏಳು ಸಾವಿರ ರೂಪಾಯಿಗಳಿಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ರಾಜ್ಯ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ.

Post a Comment

0 Comments