ಅನಂತ್ ಅಂಬಾನಿ ಸಾರಥ್ಯದ "ವನತಾರಾ"ಗೆ ರಾಷ್ಟ್ರೀಯ ಪ್ರಾಣಿ ಮಿತ್ರ ಪ್ರಶಸ್ತಿ

ರಿಲಯನ್ಸ್ ಸಂಸ್ಥೆಯ ಅನಂತ್ ಅಂಬಾನಿಯವರು ಆನೆಗಳು ಸೇರಿದಂತೆ ವನ್ಯ ಪ್ರಾಣಿಗಳ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ ತೆರೆದಿರುವ "ವನತಾರಾ"ಕ್ಕೆ   ಕೇಂದ್ರ ಸರ್ಕಾರದ ಪ್ರತಿಷ್ಠಿತ ರಾಷ್ಟ್ರೀಯ ಪ್ರಾಣಿ ಮಿತ್ರ ಪ್ರಶಸ್ತಿ ಲಭಿಸಿದೆ.
ವನತಾರಾ ಅಡಿಯಲ್ಲಿ ಆನೆಗಳ ರಕ್ಷಣೆ, ಚಿಕಿತ್ಸೆ ಮತ್ತು ಜೀವಿತಾವಧಿಯ ಆರೈಕೆಗೆ ಮೀಸಲಾಗಿರುವ ರಾಧೆ ಕೃಷ್ಣ ಟೆಂಪಲ್ ಎಲಿಫೆಂಟ್ ವೆಲ್ಫೇರ್ ಟ್ರಸ್ಟ್(RKTEWT)ನ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಗುರುವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ರಾಜ್ಯ ಸಚಿವರು ಈ ಪ್ರಶಸ್ತಿ ಪ್ರಧಾನ ಮಾಡಿದರು.

Post a Comment

0 Comments