ಮೇ 5ಕ್ಕೆ ಸ್ಕೈಪ್ ಬಂದ್; ಮೈಕ್ರೋಸಾಫ್ಟ್ ಮಹತ್ವದ ನಿರ್ಧಾರ

ವಿಡಿಯೋ ಕಾಲ್ಗೆ ಬಳಸಲಾಗುವ ಕೈಯನ್ನು ಮುಂದಿನ ಮೇ 5ನೇ ತಾರೀಖಿನಿಂದ ಮುಚ್ಚುವುದಾಗಿ ಮೈಕ್ರೋಸಾಫ್ಟ್ ಘೋಷಣೆ ಮಾಡಿದೆ.

ಸ್ಕೈಪ್ ಎಂಬ ಅಪ್ಲಿಕೇಶನ್ ಅನ್ನು 2003ರಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, 2011ರಲ್ಲಿ ಮೈಕ್ರೋಸಾಫ್ಟ್ ಇದನ್ನು ಖರೀದಿ ಮಾಡಿತ್ತು. 14 ವರ್ಷದ ಹಿಂದೆ ಸ್ಕೈಪ್ ಉನ್ನತ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸುತ್ತಿದ್ದಾಗ ಸುಮಾರು 30 ಕೋಟಿ ಬಳಕೆದಾರರಿದ್ದರು. ಆದರೆ ಪ್ರಸ್ತುತ ವಾಟ್ಸಪ್ ಫೇಸ್ಬುಕ್ ಮೆಸೆಂಜರ್ ಹಾಗೂ ನಾನಾ ರೀತಿಯ ಅಪ್ಲಿಕೇಶನ್ ಗಳ ಅಭಿವೃದ್ಧಿ, ಆವಿಷ್ಕಾರಗಳಿಂದ ಸ್ಕೈಪ್ ಬಳಕೆದಾರರ ಸಂಖ್ಯೆ 3.6 ಕೋಟಿಗೆ ಇಳಿದಿದೆ. ಆದ್ದರಿಂದ ಮೈಕ್ರೋಸಾಫ್ಟ್ ಇದನ್ನು ಬಂದ್ ಮಾಡುವ ಹಂತಕ್ಕೆ ತಲುಪಿದ್ದು, "ನಿಮ್ಮ ಖಾತೆಯನ್ನು ಏನು ಮಾಡಬೇಕು ಎಂದು ಇನ್ನು 10 ವಾರದಲ್ಲಿ ನಿರ್ಧರಿಸಿ" ಎಂದು ಹೇಳಿದೆ.

Post a Comment

0 Comments