ಗುರುವಾರ ವಿಧಾನ ಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಸಿ ಬಿ ಸುರೇಶ್ ಬಾಬು ಪ್ರಶ್ನೆಗೆ ಪ್ರತ್ಯುತ್ತರ ನೀಡಿದ ಸಚಿವರು, ತಾಂತ್ರಿಕ ಸಾಧ್ಯತೆ ಇರುವ ಕಾರಣ ಉಪ ಕೇಂದ್ರಗಳಿಂದ ನಿರಂತರ 7:00 ವಿದ್ಯುತ್ ಸರಬರಾಜು ಮಾಡಲಾಗುವುದು. ಆದರೆ ತಾಂತ್ರಿಕ ಸಾಧ್ಯತೆ ಇಲ್ಲದ ಉಪಕೇಂದ್ರಗಳಲ್ಲಿ ಪಾಳಿಯಲ್ಲಿ ಹಗಳು ಮೇಲೆ 4 ಗಂಟೆ, ಹಾಗೂ ರಾತ್ರಿ ವೇಳೆ 3:00 ಸೇರಿ ಒಟ್ಟು 7:00 3 ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಆದರೆ ಕೆಲವು ಹಳ್ಳಿ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಯಲ್ಲಿಯೂ ವ್ಯತ್ಯಯ ಉಂಟಾಗುತ್ತಿದ್ದು, ಆಗಾಗ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿರುತ್ತದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಅತ್ತ ಬಿಸಿಲಿನ ಬೇಟೆಯನ ಸಹಿಸಲಾಗದೆ ,ಇತ್ತ ವಿದ್ಯುತ್ ಪ್ರತ್ಯಯದಿಂದ ನೀರಿನ ಅಭಾವವು ಉಂಟಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳನ್ನು ಮಾಡಲಾಗದೆ ಕಂಗಾಲಾಗಿ ಕುಳಿತಿದ್ದಾರೆ. ಈ ಬಗ್ಗೆ ಸರಕಾರವು ಗಮನಹರಿಸಬೇಕಿದೆ.
0 Comments