2025-26 ನೇ ಸಾಲಿನ ರಾಜ್ಯ ಬಜೆಟ್: ಹದಿನಾರನೇ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

2025 26ನೇ ಸಾಲಿನ ರಾಜ್ಯ ಬಜೆಟ್ ಅನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿದ್ದಾರೆ. ಇದು ಮುಖ್ಯಮಂತ್ರಿ ಅವರು ಮಂಡಿಸುತ್ತಿರುವ ಹದಿನಾರನೇ ಬಜೆಟ್ ಆಗಿದೆ. ಈ ವರ್ಷದ ರಾಜ್ಯ ಬಜೆಟ್ ಗಾತ್ರ 4,09,549 ಕೋಟಿ ರೂಪಾಯಿ ಆಗಿದೆ.
ರಾಜ್ಯ ಬಜೆಟ್ ನಲ್ಲಿ ಬೆಂಗಳೂರು ನಗರಕ್ಕೆ ಬಂಪರ್ ಕೊಡುಗೆ ನೀಡಿರುವ ಸಿದ್ದರಾಮಯ್ಯರವರು ಬೆಂಗಳೂರು ನಗರಕ್ಕೆ ನೀಡುವ ಅನುದಾನದ ಮೊತ್ತವನ್ನು ಒಟ್ಟು ಏಳು ಸಾವಿರ ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಿದ್ದಾರೆ. ಬೆಂಗಳೂರು ಟನಲ್ ರಸ್ತೆಗೆ 40,000 ಕೋಟಿ ರೂಪಾಯಿ ಯೋಜನೆ ಹಂಚಿಕೆ ಮಾಡಿದ್ದಾರೆ. ಈ ಸಾಲಿನ ಬಜೆಟ್ ನಲ್ಲಿ ಸಿದ್ದರಾಮಯ್ಯರವರು ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ) ಯೋಜನೆಯಡಿ ಪ್ರಾಜೆಕ್ಟ್ 'ಮೆಜೆಸ್ಟಿಕ್ ಘೋಷಣೆ' ಮಾಡಿದರು. ಇದರಿಂದಾಗಿ ಬೆಂಗಳೂರು ನಗರ ಕೆಂಪೇಗೌಡ ಬಸ್ ನಿಲ್ದಾಣವು ಸಂಪೂರ್ಣ ಹೈಟೆಕ್ ಆಗಲಿದೆ.

ರಾಜ್ಯ ಬಜೆಟ್ ನಲ್ಲಿ ಶಾಲೆಗಳಲ್ಲಿ ಮಧ್ಯಾನದ ಬಿಸಿಯೂಟ ತಯಾರು ಮಾಡುವ ಕಾರ್ಯಕರ್ತೆಯರ ಗೌರವಧನವನ್ನು 1,000 ಏರಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಸರಕಾರಿ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರ ಗೌರವಧನವನ್ನು ಮಾಸಿಕ 2000 ರೂಪಾಯಿ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದರು.

2025 26ನೇ ಬಜೆಟ್ ನಲ್ಲಿ ಶಾಲಾ ಮಕ್ಕಳಿಗೆ ಸಿದ್ದರಾಮಯ್ಯನವರು ಸಿಹಿಸುದ್ದಿ ನೀಡಿದ್ದಾರೆ. ಶಾಲಾ ಮಕ್ಕಳಿಗೆ ವಾರದ ಆರು ದಿನ ಮೊಟ್ಟೆ ಬಾಳೆಹಣ್ಣು ವಿತರಣೆ ಮಾಡಲು ಘೋಷಣೆ ಮಾಡಲಾಗಿದೆ ಇದಕ್ಕಾಗಿ 1500 ಕೋಟಿ ಮೀಸಲಿಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಕರ್ನಾಟಕದಲ್ಲಿ ಹೊಸದಾಗಿ 500 ಪಬ್ಲಿಕ್ ಶಾಲೆಗಳು, 50 ಪ್ರೌಢ ಶಾಲೆಗಳನ್ನು ಉನ್ನತೀಕರಣ ಮಾಡುವುದಾಗಿ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. 


ರಾಜ್ಯ ಬಜೆಟ್ ನಲ್ಲಿ ಮಲ್ಟಿಪ್ಲೆಕ್ಸ್ ನಲ್ಲಿ ಏಕರೂಪದ ಟಿಕೆಟ್ ದರ ಘೋಷಣೆ ಮಾಡಿದ್ದು, ಇನ್ನು ಮುಂದೆ ಸಿನಿಮಾ ಟಿಕೆಟ್ ದರ 200 ರೂಪಾಯಿ ಆಗಿರಲಿದೆ.
ಎಸ್ಸಿ ಎಸ್ಟಿ ಸಮುದಾಯಕ್ಕೆ ಎರಡು ಕೋಟಿ ರೂಪಾಯಿವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲಾಗುವುದರ ಬಗ್ಗೆ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದರು. ಅಷ್ಟೇ ಅಲ್ಲದೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ರಸ್ತೆ ಸಣ್ಣ ನೀರಾವರಿ ಹಾಗೂ ಮೂಲಕಾರಿಗೆ ಒದಗಿಸಲು 8000 ಕೋಟಿ ರೂಪಾಯಿ ನೀಡಲಾಗುವುದು ಎಂದರು. 


ರಾಜ್ಯದ ಗೃಹಲಕ್ಷ್ಮಿಯರಿಗೆ ಸಿಹಿಸುದ್ದಿ ನೀಡಿರುವ ಮುಖ್ಯಮಂತ್ರಿಗಳು 'ಅಕ್ಕ ಕೋ ಆಪರೇಟಿವ್ ಸೊಸೈಟಿ' ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದರು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಈ ವ್ಯಾಪ್ತಿಗೆ ಬರಲಿದ್ದಾರಂತೆ.


ರಾಜ್ಯ ಬಜೆಟ್ ಮಧ್ಯಪ್ರಿಯರಿಗೆ ಶಾಪ್ ನೀಡಿದ್ದು ಮಧ್ಯದ ಬೆಲೆ ಏರಿಕೆಯಾಗಲಿದೆ. ಅಬಕಾರಿ ಇಲಾಖೆಯಿಂದ 36500 ಕೋಟಿ ರೂಪಾಯಿ ಆದಾಯದ ಗುರಿ ನಿಗದಿ ಮಾಡಿರುವ ರಾಜ್ಯ ಸರ್ಕಾರ ಅಬಕಾರಿ ಸ್ಲಾಬ್ ಪರಿಷ್ಕರಣಿಗೆ ನಿರ್ಧರಿಸಿದೆ ಎಂದು ಭಾಷಣದಲ್ಲಿ ಮುಖ್ಯಮಂತ್ರಿಗಳು ಹೇಳಿದ್ದಾರೆ. 

ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವೆಂದು ಘೋಷಣೆ ಮಾಡಿರುವ ಸಿದ್ದರಾಮಯ್ಯ, ನಕ್ಸಲ್ ಪೀಡಿತ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ 10 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ನಕ್ಸಲ್ ನಿಗ್ರಹ ಪಡೆಯನ್ನು ವಿಸರ್ಜನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.


ರಾಜ್ಯ ಬಜೆಟ್ ನಲ್ಲಿ ಮೈಸೂರು, ಕಲಬುರ್ಗಿಯಲ್ಲಿ ನಿಮ್ಹಾನ್ಸ್ ಘಟಕ, ಕೊಪ್ಪಳದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ರಾಯಚೂರಿನಲ್ಲಿ ಕಿದ್ವಾಯಿ ಘಟಕ ನಿರ್ಮಾಣ ಮಾಡುವುದರ ಬಗ್ಗೆ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿನ 50,000 ರೈತರಿಗೆ ಸಹಾಯಧನ ನೀಡುವುದಾಗಿ ರಾಜ್ಯ ಸರ್ಕಾರವು ಘೋಷಣೆ ಮಾಡಿದೆ.



Post a Comment

0 Comments