ಪಿಎಂ ಇಂಟರ್ನ್ಶಿಪ್; ನೋಂದಣಿಗೆ ಮಾರ್ಚ್ 12 ಕೊನೆಯ ದಿನ

ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು.
ಪಿ ಎಂ ಇಂಟರ್ನ್ಶಿಪ್ ಯೋಜನೆಯು ಯುವ ಜನರಿಗೆ ಅಮೂಲ್ಯವಾದ ಅವಕಾಶಗಳನ್ನು ಒದಗಿಸಲು ಸರ್ಕಾರ ಆರಂಭಿಸಿದ ಯೋಜನೆಯಾಗಿದೆ. ಈ ಕಾರ್ಯಕ್ರಮ ಅಗ್ರ 500 ಕಂಪನಿಗಳಲ್ಲಿ ಇಂಟರ್ನ್ಶಿಪ್‌ಗಳನ್ನು ನೀಡುವ ಮೂಲಕ ಶೈಕ್ಷಣಿಕ ಕಲಿಕೆ ಮತ್ತು ನೈಜ ಪ್ರಪಂಚದ ಅನುಭವದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದು 12 ತಿಂಗಳ ಅಂದರೆ ಒಂದು ವರ್ಷದ ಕಾಲ ಇಂಟರ್ನ್ಶಿಪ್ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಿದೆ. ಪ್ರಾಯೋಗಿಕ ಹಂತದಲ್ಲಿ 1.25 ಲಕ್ಷ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿರುವ ಈ ಯೋಜನೆಯೂ ಐದು ವರ್ಷಗಳ ಅವಧಿಯಲ್ಲಿ ಒಂದು ಕೋಟಿ ಯುವ ಜನತೆಗೆ ಇಂಟರ್ನ್ಶಿಪ್ ಅವಕಾಶ ಒದಗಿಸಿ ಕೊಡುವ ಗುರಿಯನ್ನು ಹೊಂದಿದೆ.

ಇನ್ನು 18 ರಿಂದ 24 ವರ್ಷದೊಳಗಿನ 10ನೇ, 12ನೇ ತರಗತಿ, ಐಟಿಐ, ಪಾಲಿಟೆಕ್ನಿಕ್ ಅಥವಾ ಡಿಪ್ಲೋಮೋ ಕೋರ್ಸ್ ಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ಅರ್ಜಿ ನಮೂನೆ ಭರ್ತಿ ಮಾಡಲು ಮಾರ್ಚ್ 12 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ pminternship.mca.gov.in ಗೆ ಭೇಟಿ ನೀಡಿ ಮೂಲ ಮಾಹಿತಿಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.


Post a Comment

0 Comments