ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ನೀಡಿದ್ದ 252 ರನ್ನುಗಳ ಬೆನ್ನು ಹತ್ತಿದ ಭಾರತೀಯ ಪಡೆ 49 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ತನ್ನ ಗುರಿ ತಲುಪಿತು. ರೋಹಿತ್ ಶರ್ಮಾ 76, ಶ್ರೇಯಸ್ ಅಯ್ಯರ್ 48, ಶುಭ್ಮನ್ ಗಿಲ್ 31, ಅಕ್ಷರ್ ಪಟೇಲ್ 29, ಹಾರ್ದಿಕ್ ಪಾಂಡ್ಯ18, ಕೆಎಲ್ ರಾಹುಲ್ ಅಜೇಯ 34, ರವೀಂದ್ರ ಜಡೇಜ 9 ಹಾಗೂ ವಿರಾಟ್ ಕೊಹ್ಲಿ 1 ರನ್ ಗಳಿಸುವ ಮೂಲಕ ಗೆಲುವಿನ ರೂವಾರಿಗಳಾದರು. ಭಾರತದ ಪರ ವರುಣ್ ಚಕ್ರವರ್ತಿ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ ಶಮಿ ಮತ್ತು ಜಡೇಜಾ ತಲಾ 1 ವಿಕೆಟ್ ಪಡೆದರು.
2000ನೇ ಇಸವಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲೂ ಭಾರತ ನ್ಯೂಜಿಲೆಂಡ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 265 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತ್ತು. ಈ ಬಾರಿ ಕೀವೀಸ್ ಗೆ ಸಡ್ಡು ಹೊಡೆಯುವ ಮೂಲಕ ಭಾರತ ಗೆಲುವಿನ ಸೇಡು ತೀರಿಸಿಕೊಂಡಂತಾಗಿದೆ.
0 Comments