ಮಂಗಳೂರಿನ ತಲಪ್ಪಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾರದಾ ಸಮೂಹ ಸಂಸ್ಥೆಗಳು ಕಳೆದ ಹತ್ತು ವರ್ಷಗಳಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಪರೀಕ್ಷೆಯನ್ನು ನಡೆಸುತ್ತಿದೆ. ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಮತ್ತು ಹಾಸ್ಟೆಲ್ ಜೊತೆಗೆ ಶೇ. 100ರಷ್ಟು ಉಚಿತ ಪದವಿ ಪೂರ್ವ ಶಿಕ್ಷಣವನ್ನು ನೀಡುತ್ತಿದೆ.
ಇತ್ತೀಚೆಗೆ ಜನಮಿತ್ರ ಪ್ರಾದೇಶಿಕ ದಿನಪತ್ರಿಕೆ ಆಯೋಜಿಸಿದ್ದ ಹಾಸನದ ಮೊಟ್ಟಮೊದಲ ಎಜುಕೇಶನ್ ಏಕ್ಸ್ಪೋದಲ್ಲಿ ಮಂಗಳೂರಿನ ಶಾರದ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಭಾಗವಾಗಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರೊಂದಿಗೆ ಸಂವಹನ ನಡೆಸಿತ್ತು. ಆದರೆ ಈ ವೇಳೆ ಅನೇಕ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಶಾರದಾ ಸಮೂಹ ಸಂಸ್ಥೆಗಳು ನಡೆಸುತ್ತಿರುವ ಈ ಸ್ಕಾಲರ್ಶಿಪ್ ಪರೀಕ್ಷೆ ಬಗ್ಗೆ ಮಾಹಿತಿಯ ಕೊರತೆ ಇದ್ದೂದು ಕಂಡು ಬಂದಿತ್ತು. ಹೀಗಾಗಿ ಶಾರದಾ ಸ್ಕಾಲರ್ಶಿಪ್ ಪರೀಕ್ಷೆಯು ಮುಂದಿನ ಶೈಕ್ಷಣಿಕ ವರ್ಷಕ್ಕೆ ಪೂರ್ಣಗೊಂಡಿದ್ದರೂ ಸಹ, ಜನತೆಯ ವಿನಂತಿಯಿಂದಾಗಿ ಸಂಸ್ಥೆಯು ಆನ್ಲೈನ್ ಮೂಲಕ ಅಂತಿಮ ಸುತ್ತಿನ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ಈ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು https://sharadavidyanikethanapuc.com ಲಿಂಕ್ ಮೂಲಕ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಈ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments