*ಆರೋಗ್ಯ ವರ್ಧಕ ಬಜೆಟ್ 2025*

ದೇಶದ ಜನತೆಯ ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ‌. ಆದ್ದರಿಂದ ರಾಷ್ಟ್ರದ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಈ ವರ್ಷ ಆರ್ಥಿಕ ಸಚಿವರು ಮಂಡಿಸಿದ ಬಜೆಟ್ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇನ್ನು ಮುಂದೆ ಜೀವ ರಕ್ಷಕ ಔಷಧಗಳು ಸ್ವಲ್ಪ ಅಗ್ಗವಾಗಿ ಸಿಗಲಿದೆ.




ದಿನನಿತ್ಯ ರೋಗಿಗಳು ಬಳಸುವ ಔಷಧಗಳು ಅಥವಾ ಡ್ರಗ್ಸ್ ಆಮದು ಮೇಲಿನ ಪರಿಹಾರವಾಗಿ, ಕ್ಯಾನ್ಸರ್, ಕೆಲವೊಂದು ಅಪರೂಪದ ಕಾಯಿಲೆಗಳು ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ 36 ಜೀವ ರಕ್ಷಕ ಡ್ರಗ್ಸ್ ಮತ್ತು ಔಷಧಿ ವಸ್ತುಗಳನ್ನು ಮೂಲಭೂತ ಕಸ್ಟಮ್ಸ್ ಸುಂಕ (ಬಿಸಿಡಿ)ಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ. ಇದಲ್ಲದೆ ರೋಗಿಗಳ ಸಹಾಯ ಕಾರ್ಯಕ್ರಮಗಳ ಅಡಿಯಲ್ಲಿ 13 ಹೊಸ ಡ್ರಗ್ಸ್ ಮತ್ತು ಔಷಧಗಳೊಂದಿಗೆ 37 ಔಷಧಗಳನ್ನು ರೋಗಿಗಳಿಗೆ ಉಚಿತವಾಗಿ ಸರಬರಾಜು ಮಾಡಿದರೆ ಮೂಲಭೂತ ಕಸ್ಟಮ್ಸ್ ಸುಂಕದಿಂದ (ಬಿಸಿಡಿ) ವಿನಾಯಿತಿ ನೀಡಲಾಗಿದೆ.


ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಎಂಬ ಮಾರಕ ಕಾಯಿಲೆ ಸಾಮಾನ್ಯವಾಗಿ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಬಡವರು ಹಾಗೂ ಮಾಧ್ಯಮ ವರ್ಗದ ಜನರು ದುಬಾರಿ ಕ್ಯಾನ್ಸರ್ ಔಷಧಗಳ ವೆಚ್ಚವನ್ನು ಭರಿಸಲಾಗದೆ ಪರದಾಡುವ ಪರಿಸ್ಥಿತಿ ಎದುರಾಗುತ್ತಿತ್ತು. ಇಂತಹ ಬಡವರ ಪಾಲಿಗೆ ಕ್ಯಾನ್ಸರ್ ನಿವಾರಕ ಔಷಧಗಳು ಇನ್ನು ಮುಂದೆ ಅಗ್ಗವಾಗಿ ಸಿಗಲಿರುವುದು ವರದಾನವೇ ಸರಿ. ಆದ್ದರಿಂದ ಭಾರತದ ಜನತೆಯ ಪಾಲಿಗೆ ಈ ವರ್ಷದ ಬಜೆಟ್ ಆರೋಗ್ಯವರ್ಧಕ ಬಜೆಟ್ ಆಗಲಿದೆ.

Post a Comment

0 Comments