ಅಡಿಕೆ ಬೆಳೆಗಾರರು ತಾವು ಬೆಳೆದ ಅಡಿಕೆಯನ್ನು ಮಾರುಕಟ್ಟೆಗೆ ಮಾರಾಟ ಮಾಡಲು ಸಾಗಿಸುವ ಮೊದಲು ಆನ್ಲೈನ್ ನಲ್ಲಿ ಇ-ವೇ ಬಿಲ್ ನಮೂದಿಸುವುದು ಕಡ್ಡಾಯವಾಗಿದೆ. ನೀವೇ ಬಿಲ್ ಬಗ್ಗೆ ಸಾಮಾನ್ಯ ರೈತರಿಗೆ ಯಾವುದೇ ಮಾಹಿತಿ ಇಲ್ಲ. ಈ ಕಾನೂನು ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡದೆ ಕಾನೂನು ಜಾರಿಗೊಳಿಸಿರುವುದು ಅಡಿಕೆ ಬೆಳೆಗಾರರಲ್ಲಿ ಆತಂಕ- ಆಕ್ರೋಶವನ್ನು ಮೂಡಿಸಿದೆ.
ಇ-ವೇ ಬಿಲ್ ಎಂದರೇನು?
ಇ-ವೇ ಬಿಲ್ ಎಂದರೆ 50,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಸರಕುಗಳನ್ನು ಅಂತರಾಜ್ಯ ಮತ್ತು ರಾಜ್ಯದೊಳಗೆ ಸಾಗಣೆ ಮಾಡಬೇಕಾದರೆ ಹೊಂದಿರಬೇಕಾದ ಅಗತ್ಯ ಪರವಾನಗಿ. ಇದು ಸರಕುಗಳು, ರವಾನೆದಾರರು, ಸ್ವೀಕರಿಸುವವರು ಮತ್ತು ಸಾಗಣೆದಾರರ ವಿವರಗಳನ್ನು ಒಳಗೊಂಡಿರುತ್ತದೆ. ಇದನ್ನು ಜಿಎಸ್‌ಟಿಎನ್ ಮೂಲಕ ಎಲೆಕ್ಟ್ರಾನಿಕ್ ರೂಪದಲ್ಲಿ ಉತ್ಪಾದಿಸಬಹುದು.
ಪ್ರಸ್ತುತ ಅಡಿಕೆ ಬೆಳೆಗಾರರು ತಮ್ಮ ಅಡಿಕೆಯನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡಬೇಕಾದರೆ ಇ-ವೇ ಬಿಲ್ ಅನ್ನು ಹೊಂದಿರಬೇಕು.ಆದರೆ ಈ ಅಡಿಕೆ ಬೆಳೆಗಾರರಿಗೆ ಇ-ವೇ ಬಿಲ್ ಎಂದರೇನು? ಇದನ್ನು ಎಲ್ಲಿ ಹೇಗೆ ಮಾಡಿಸುವುದು ಎಂಬ ಬಗ್ಗೆ ಮಾಹಿತಿ ಕೊರತೆ ಇದೆ. ಈ ಸಮಸ್ಯೆಗಳಿಂದ ಬಳಲುತ್ತಿರುವ ಬೆಳೆಗಾರರು ಕದ್ದು ಮುಚ್ಚಿ ಬೇಡಿಕೆಗಳನ್ನು ಮಾರುಕಟ್ಟೆಗೆ ಸಾಗಿಸುವ ಪರಿಸ್ಥಿತಿ ಉಂಟಾಗುತ್ತಿದೆ. ಇ-ವೇ ಬಿಲ್ ಎಂಬ ಅವೈಜ್ಞಾನಿಕ ಮಾನದಂಡವನ್ನು ರದ್ದುಗೊಳಿಸಿ ಅಡಿಕೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.
0 Comments