"ವಿಶ್ವ ಸುಂದರಿ-2025" ಕಿರೀಟ ಧರಿಸಿದ ಒಪಲ್ ಸುಚಾತಾ

2025ನೇ ಸಾಲಿನ ಪ್ರತಿಷ್ಠಿತ ವಿಶ್ವ ಸುಂದರಿ ಕಿರೀಟವನ್ನು "ಮಿಸ್ ಥೈಲ್ಯಾಂಡ್" ಆಗಿರುವ ಒಪಲ್ ಸುಜಾತಾ ಅವರು ತೊಟ್ಟಿದ್ದಾರೆ. ಹೈದರಾಬಾದಿನ ಹಿಟೆಕ್ಸ್ ಎಕ್ಸಿಬಿಷನ್ ಸೆಂಟರ್ ನಲ್ಲಿ ನಡೆದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ 21 ವರ್ಷದ ಚೆಲುವೆ 72ನೇ ವಿಶ್ವಸುಂದರಿ ಪಟ್ಟವನ್ನು ಜಯಿಸಿದ್ದಾರೆ.
ವಿಶ್ವ ಸುಂದರಿ ಕಿರೀಟವನ್ನು ತನ್ನದಾಗಿಸಿಕೊಂಡಿರುವ ಒಪಲ್ ಸುಚಾತಾ ಅವರು 8.5 ಕೋಟಿ ರೂಪಾಯಿ ನಗದನ್ನು ಬಹುಮಾನವಾಗಿ ಪಡೆಯಲಿದ್ದಾರೆ. 

ಥೈಲ್ಯಾಂಡ್ ನ ಫುಕೆಟ್ ಎಂಬಲ್ಲಿ 2003ರ ಸೆಪ್ಟೆಂಬರ್ ನಲ್ಲಿ ಒಪಲ್ ಜನಿಸಿದರು. ಇವರಿಗೆ ಮಾಜಿ ವಿಶ್ವ ಸುಂದರಿ ಹಾಗೂ ಜೆಕ್ ರಿಪಬ್ಲಿಕ್ ನ ಚೆಲುವೆ ಕ್ರಿಸ್ಟಿನ ಪಿಸ್ಕೊವಾ ಅವರು ಕಿರೀಟ ತೊಡಿಸಿದ್ದಾರೆ. 

ಈ ಬಾರಿಯ ವಿಶ್ವ ಸುಂದರಿ ಆಯ್ಕೆ ಸಮಿತಿಯಲ್ಲಿ ಉದ್ಯಮಿ ಸುಧಾರೆಡ್ಡಿ, ಮಿಸ್ ಇಂಗ್ಲೆಂಡ್ ಡಾ. ಕ್ಯಾರಿ ನಾ ಟುರ್ರೆಲ್ ಸೇರಿದಂತೆ ಹಲವು ಗಣ್ಯರಿದ್ದರು. ಈ ವಿಶ್ವ ಸುಂದರಿ ಕಿರೀಟಕ್ಕೆ 108 ಸ್ಪರ್ಧಿಗಳು ಸ್ಪರ್ಧಿಸಿದ್ದರು. ಅದರಲ್ಲಿ ಅಂತಿಮವಾಗಿ ಒಪಲ್ ಸುಚಾತಾ ಅವರು ಆಯ್ಕೆಯಾಗಿದ್ದಾರೆ.

Post a Comment

0 Comments