ಯುಪಿಎಸ್ಸಿ ಅಧ್ಯಕ್ಷೆರಾಗಿದ್ದ ಪ್ರೀತಿ ಸೂಧನ್ ಅವರ ಅಧಿಕಾರವಧಿ ಏಪ್ರಿಲ್ 29ಕ್ಕೆ ಮುಗಿದಿದ್ದು, ಅಂದಿನಿಂದ ಈ ಹುದ್ದೆ ಖಾಲಿಯಾಗಿಯೇ ಉಳಿದಿತ್ತು. ಅಜಯ್ ಕುಮಾರ್ ಅವರ ಆಯ್ಕೆಗೆ ರಾಷ್ಟ್ರಪತಿ ದ್ರೌಪದಿ ಮುರುಮು ಅವರು ಅನುಮೋದನೆ ನೀಡಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
1985 ನೇ ತಂಡದ ಕೇರಳ ಕೇಡನ್ನ ಐಎಎಸ್ ಅಧಿಕಾರಿಯಾಗಿದ್ದ ಅಜಯ್ ಕುಮಾರ್ 2019ರ ಆಗಸ್ಟ್ 23ರಿಂದ 2025ರ ಅಕ್ಟೋಬರ್ 31ರವರೆಗೆ ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದಾರೆ.
ಪ್ರಸ್ತುತ ಕೇಂದ್ರ ಲೋಕಸೇವಾ ಆಯೋಗದಲ್ಲಿ ಇಬ್ಬರು ಸದಸ್ಯರ ಸ್ಥಾನಗಳು ಖಾಲಿ ಇದ್ದ ಯುಪಿಎಸ್ಸಿ ಅಧಿಕಾರ ಅವಧಿಯು ಆರು ವರ್ಷಗಳ ಕಾಲ ಅಥವಾ 65 ವರ್ಷ ಆಗುವವರೆಗೂ ಇರಲಿದೆ. ಐಎಎಸ್ ಐಪಿಎಸ್ ಐಎಫ್ಎಸ್ ಸೇರಿದಂತೆ ಕೇಂದ್ರ ಆಡಳಿತಾತ್ಮಕ ಹುದ್ದೆಗಳನ್ನು ಭರ್ತಿ ಮಾಡಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಹಾಗೂ ಆಯ್ಕೆ ಪ್ರಕ್ರಿಯೆಯನ್ನು ಯುಪಿಎಸ್ಸಿ ಕೈಗೊಳ್ಳಲಿದೆ.
0 Comments