ವಸತಿ ಶಾಲಾ-ಕಾಲೇಜುಗಳಲ್ಲಿ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ..!!

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ, ಕಾಲೇಜುಗಳಿಗೆ ಹಾಗೂ ಮೌಲಾನ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಉಪನ್ಯಾಸಕರು, ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.

ಖಾಲಿಯಿರುವ ಅತಿಥಿ ಉಪನ್ಯಾಸಕರ ಹುದ್ದೆ ವಿವರ:
ಕನ್ನಡ-3
ಇಂಗ್ಲಿಷ್-3 
ಉರ್ದು-3
ಗಣಿತ-3
ಭೌತಶಾಸ್ತ್ರ-3
ರಸಾಯನಶಾಸ್ತ್ರ-3
ಜೀವಶಾಸ್ತ್ರ-3
ವ್ಯವಹಾರ ಅಧ್ಯಯನ-1
ಲೆಕ್ಕಶಾಸ್ತ್ರ-2
ಕಂಪ್ಯೂಟರ್ ಸೈನ್ಸ್-1
ಅರ್ಥಶಾಸ್ತ್ರ-1
ಇತಿಹಾಸ-1
ಒಟ್ಟು 27 ಉಪನ್ಯಾಸಕರ ಹುದ್ದೆಗಳು ಖಾಲಿಯಿವೆ.

ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳ ವಿವರ: 
ಕನ್ನಡ-7
ಇಂಗ್ಲಿಷ್-9
ಹಿಂದಿ-4
ಉರ್ದು-2
ಗಣಿತ-4
ಸಾಮಾನ್ಯ ವಿಜ್ಞಾನ-8
ಗಣಕಯಂತ್ರ-2
ದೈಹಿಕ ಶಿಕ್ಷಣ-2
ಒಟ್ಟು 42 ಅತಿಥಿ ಶಿಕ್ಷಕರ ಹುದ್ದೆ ಖಾಲಿ ಇದೆ.

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶಿವಮೊಗ್ಗ ಹಾಗೂ ಎಲ್ಲಾ ತಾಲೂಕು ಮಾಹಿತಿ ಕೇಂದ್ರ ಕಚೇರಿಗಳಲ್ಲಿ ಅಥವಾ ವೆಬ್ಸೈಟ್ https://dom.karnataka.gov.in ನಿಂದ ಪಡೆದು ಮೇ 19ರ ಒಳಗೆ ಇಲಾಖೆಯ ಜಿಲ್ಲಾ ಕಛೇರಿಯಲ್ಲಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 7676888388 ಗೆ ಸಂಪರ್ಕಿಸಬಹುದು.

Post a Comment

0 Comments