ಐಎನ್ಎಸ್ ವಿಕ್ರಾಂತ್ ಅಬ್ಬರಕ್ಕೆ ಪಾಕಿಸ್ತಾನದ ಕರಾಚಿ ಬಂದರು ಧ್ವಂಸ..!!

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭವಾಗಿದ್ದು ಭಾರತೀಯ ವಾಯು ಸೇನೆಯು ಪಾಕಿಸ್ತಾನದ ಹಲವು ನಗರಗಳ ಮೇಲೆ ದಾಳಿ ನಡೆಸುತ್ತಿದೆ. ಪಾಕಿಸ್ತಾನ ಸೇನೆಯು ಭಾರತದ ಅಮಾಯಕ ಜನರ ಮೇಲೆ ದಾಳಿ ನಡೆಸುತ್ತಿದ್ದು, ಇದಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನಗಳ ಸೇನಾ ನೆಲೆಗಳನ್ನೇ ಹೊಡೆದುರುಳುಸುತ್ತಿದೆ.
ಇಸ್ಲಾಮಾಬಾದ್,ಲಾಹೋರ್, ರಾವಲ್ಪಿಂಡಿ ಸೇರಿದಂತೆ ಹಲವು ನಗರಗಳ ಮೇಲೆ ಭಾರತ ದಾಳಿ ನಡೆಸಿದೆ. ಭಾರತೀಯ ನೌಕಾಪಡೆಯು ತನ್ನ ಯುದ್ಧ ನೌಕೆ ಐಎನ್ಎಸ್ ವಿಕ್ರಾಂತ್ ಮೂಲಕ ತನ್ನ ಯುದ್ಧಾರ್ಭಟವನ್ನು ಶುರುಮಾಡಿದೆ. ಪಾಕಿಸ್ತಾನದ ಕರಾಚಿ ಬಂದರನ್ನೇ ಭಾರತ ಸರ್ವನಾಶ ಮಾಡಿದೆ.

ಐಎನ್ಎಸ್ ವಿಕ್ರಾಂತ್ ನೌಕೆಯು 10ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಕರಾಚಿ ಬಂದರನ್ನು ಧ್ವಂಸಗೊಳಿಸಿದೆ. 1971ರ ನಂತರ ಭಾರತ ಇದೀಗ ಕರಾಚಿ ಮೇಲೆ ದಾಳಿ ನಡೆಸಿದೆ. ಒಂದು ಏರ್ ಕ್ರಾಫ್ಟ್ ಮೂಲಕ ಭಾರತ ಈ ದಾಳಿಯನ್ನು ನಡೆಸಿದೆ ಎಂದು ವರದಿಯಾಗಿದೆ.

Post a Comment

0 Comments