ಪಾಕಿಸ್ತಾನಕ್ಕೆ "ಆಪರೇಶನ್ ಸಿಂಧೂರ" ಮೂಲಕ ಪ್ರತ್ಯುತ್ತರ ನೀಡಿದ ಭಾರತ..!!!

ಭಾರತದ ಕಾಶ್ಮೀರದಲ್ಲಿ ಪಾಕಿಸ್ತಾನ ಉಗ್ರರು ದಾಳಿ ನಡೆಸಿ 26 ಅಮಾಯಕರನ್ನು ಬಲಿ ತೆಗೆದುಕೊಂಡ ಕೃತ್ಯಕ್ಕೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ. "ಆಪರೇಷನ್ ಸಿಂಧೂರ" ಎಂಬ ಕಾರ್ಯಾಚರಣೆಯ ಮೂಲಕ ಮಧ್ಯರಾತ್ರಿ 1.40 ರ ಸುಮಾರಿಗೆ ಪಾಕಿಸ್ತಾನದ 9 ಉಗ್ರ ನೆಲೆಗಳ ಮೇಲೆ ಮಿಸೈಲ್ ದಾಳಿ ನಡೆಸಿ ಹಲವು ಉಗ್ರರನ್ನು ಮಟ್ಟ ಹಾಕಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸುತ್ತ ಸಭೆಗಳನ್ನು ನಡೆಸಿ ಕೊನೆಗೂ ಭಾರತೀಯ ಹೆಣ್ಣು ಮಕ್ಕಳ ಸಿಂಧೂರ ಭಾಗ್ಯ ಅಳಿಸಿದ ಪಾಪಿ ಪಾಕ್ ಉಗ್ರರ ಮೂಲಗಳನ್ನೇ ಉಡೀಸ್ ಮಾಡಲು ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಮುನ್ನುಡಿ ಬರೆದಿದ್ದಾರೆ. ಈ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿಯನ್ನು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ವಹಿಸಿಕೊಂಡಿದ್ದರು. ಈ ದಾಳಿ ಕೇವಲ ಪಾಕ್ ಉಗ್ರರ ನೆಲೆಗಳನ್ನು ಗುರಿಯಾಗಿಸಿ ನಡೆಸಲಾಗಿದೆ.ಮೂಲಗಳ ಪ್ರಕಾರ, ಆಪರೇಷನ್ ಸಿಂಧೂರ್ ಅಡಿಯಲ್ಲಿ, ಪಾಕಿಸ್ತಾನದ ಮುರಿಡ್ಕೆ, ಕೋಟ್ಲಿ, ಮುಜಫರಾಬಾದ್ ಮತ್ತು ಬಹವಾಲ್ಪುರ್ ಸೇರಿದಂತೆ 9 ಸ್ಥಳಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಲಾಗಿದೆ. ಇಲ್ಲಿದ್ದ ಭಯೋತ್ಪಾದಕರ ಅಡಗುತಾಣಗಳನ್ನು ನಾಶಪಡಿಸಲಾಗಿದೆ.

ಕೊಟ್ಲಿ, ಬಹವಾಲ್ಪುರ್, ಮುಜಾಫರ್ ಬಾದ್, ಗುಲ್ಫರ್, ಭೀಂಬರ್, ಬಾಘ್, ಸಿಯಾಲ್ ಕೋಟ್, ಮುರಿದ್ಕೆ, ಚಕಾಮ್ರ ಮೇಲೆ ದಾಳಿ ನಡೆಸಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ರಾತ್ರಿ 1.30 ಕ್ಕೆ ಭಾರತೀಯ ಸೇನೆ ದಾಳಿ ನಡೆಸಿದೆ.ಭಾರತೀಯ ಪಡೆಗಳು ಯಶಸ್ವಿಯಾಗಿ ಹೊಡೆದುರುಳಿಸಿದ ಒಂಬತ್ತು ಗುರಿಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿ ಮತ್ತು ಐದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿವೆ. ಪಾಕಿಸ್ತಾನದಲ್ಲಿರುವ ಗುರಿಗಳಲ್ಲಿ ಬಹಾವಲ್ಪುರ್, ಮುರಿಡ್ಕೆ ಮತ್ತು ಸಿಯಾಲ್ಕೋಟ್ ಸೇರಿವೆ.

ಈ ಕಾರ್ಯಾಚರಣೆಯನ್ನು ನಡೆಸಿದ ಭಾರತೀಯ ಯೋಧರಿಗೆ ಶತಕೋಟಿ ನಮನಗಳು.

Post a Comment

0 Comments