ದೇಶದ ಭದ್ರತಾ ಪಡೆಗಳ ಮನೋಬಲ ಕುಗ್ಗಿಸಬೇಡಿ: ಸುಪ್ರೀಂ ಕೋರ್ಟ್..!!

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟ ಘಟನೆಯ ನ್ಯಾಯಾಂಗ ತನಿಕೆಯನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಪಹಲ್ಗಾಮ್ ದಾಳಿಯ ತನಿಖೆಯನ್ನು ನಿವೃತ್ತ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯ ಅರ್ಜಿದಾರರನ್ನು ಸೂರ್ಯಕಾಂತ್ ಮತ್ತು ಕೋಟೇಶ್ವರ ಸಿಂಗ್ ಪೀಠವು ತರಾಟೆಗೆ ತೆಗೆದುಕೊಂಡಿದ್ದು, "ನಿವೃತ್ತ ನ್ಯಾಯಮೂರ್ತಿಗಳು ತಜ್ಞರಲ್ಲ" ಎಂದು ಹೇಳಿದೆ. 

ಇಂತಹ ಭಯೋತ್ಪಾದಕ ದಾಳಿಯ ಸಂದರ್ಭವು ದೇಶದ ಪ್ರತಿಯೊಬ್ಬ ನಾಗರಿಕರು ಭಯೋತ್ಪಾದನೆಯ ವಿರುದ್ಧ ಹೋರಾಡಲು ಕೈಜೋಡಿಸಿದ್ದಾರೆ. ಈ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮೂಲಕ ಭದ್ರತಾ ಪಡೆಗಳ ಮನೋಬಲ ಕುಗ್ಗಿಸಬಾರದು. ಇಂತಹ ವಿಷಯಗಳನ್ನು ಮುಂದೆ ತರಬಾರದು ಎಂದು ಪೀಠವು ಕಟುವಾಗಿ ಹೇಳಿದೆ. ಅಷ್ಟೇ ಅಲ್ಲದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪಡೆಯುವಂತೆ ಪತೇಶ್ ಕುಮಾರ್ ಸಾಹು ಹಾಗೂ ಇತರರಿಗೆ ಸೂಚನೆ ನೀಡಿದೆ.




Post a Comment

0 Comments