ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಶಿಕ್ಷಣ ಪೂರ್ಣಗೊಳಿಸಿರಬೇಕು. ಹಾಗೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಂವಹನ ಕೌಶಲ್ಯವನ್ನು ಹೊಂದಿರಬೇಕು. ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳಿಗೆ ಮಾಸಿಕ 25,000ನಿಂದ 30,000 ರೂಂ. ವರೆಗೆ ಆಕರ್ಷಕ ವೇತನವನ್ನು ಉದ್ಯೋಗಿಗಳ ಕಾರ್ಯಕ್ಷಮತೆಗೆ ಅನುಗುಣವಾಗಿ ನೀಡಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸ್ಥೆಯು ಆರಂಭಿಕವಾಗಿ ತರಬೇತಿಯನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಮ್ಮದೇ ತಾಲೂಕಿನಿಂದ ಕೆಲಸ ಮಾಡಲು ಅವಕಾಶವಿರುತ್ತದೆ. ಮೊದಲ ಆರು ತಿಂಗಳು ಪ್ರೊಬೆಶನರಿ ಅವಧಿಯಾಗಿದ್ದು, ಈ ವೇಳೆ ಎಐ ಕುರಿತು ಜಾಗೃತಿ ಮೂಡಿಸಲು ಅಭ್ಯರ್ಥಿಗಳು ಫೀಲ್ಡ್ ನಲ್ಲಿ ಕೆಲಸ ಮಾಡಬೇಕು. ಆರು ತಿಂಗಳ ಬಳಿಕ ಖಾಯಂ ಉದ್ಯೋಗಿಯಾಗಿ ಕಚೇರಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.
ನಾಡಿನ ಶ್ರೇಷ್ಠ ಎಐ ವಿಜ್ಞಾನಿ ಅಮೆರಿಕದ ಪ್ರೊಫೆಸರ್ ಎಸ್ ಎಸ್ ಅಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಎಐ ಕಾರ್ಡ್ ಅಭಿವೃದ್ಧಿಪಡಿಸಲಾಗಿದೆ. ಈ ಕಾರ್ಡನ್ನು ಪ್ರಸ್ತುತ 32 ಕ್ಷೇತ್ರಗಳ 6,000ಕ್ಕೂ ಅಧಿಕ ಮಂದಿ ಉಪಯೋಗಿಸುತ್ತಿದ್ದು, ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಎಐ ಸದ್ಯ ವಿಶ್ವದಲ್ಲಿಯೇ ಜನಪ್ರಿಯತೆಯೊಂದಿಗೆ ಅನಿವಾರ್ಯವಾಗುತ್ತಿದೆ. ಭವಿಷ್ಯದಲ್ಲಿ ಎಐ ಎನ್ನುವುದಕ್ಕಿಂತ ಭವಿಷ್ಯವೇ ಎಐ ಎಂಬ ಮಟ್ಟಿಗೆ ಬೆಳೆದಿದೆ. ಎಐ ಅಳವಡಿಸಿಕೊಳ್ಳುವುದರಿಂದ ನಮ್ಮ ವೃತ್ತಿ, ಪ್ರವೃತ್ತಿಯಲ್ಲಿ ಕೌಶಲ್ಯ ಹೆಚ್ಚಿಸಿಕೊಳ್ಳುವುದರೊಂದಿಗೆ ನಮ್ಮ ಭವಿಷ್ಯವನ್ನು ನಿರ್ಧರಿಸಲಿದೆ. ವಿದ್ಯಾರ್ಥಿಗಳಿಂದ ಹಿಡಿದು ಕೃಷಿ, ಉದ್ಯಮ, ವಕೀಲ, ಡಾಕ್ಟರ್ ಹೀಗೆ ಒಟ್ಟು 32 ಕ್ಷೇತ್ರಗಳಿಗೆ ಈ ಕಾರ್ಡನ್ನು ಅಭಿವೃದ್ಧಿಪಡಿಸಲಾಗಿದೆ.
ಯತಿಕಾರ್ಪ್ ಸಂಸ್ಥೆ ಬಗ್ಗೆ ಮಾಹಿತಿ
2014ರಲ್ಲಿ ಆರಂಭಗೊಂಡ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತಂತ್ರಜ್ಞಾನ ಆಧಾರಿತ ಸಂಸ್ಥೆಯಾಗಿದೆ. ಕಂಪ್ಯೂಟರ್ ಸೇವಾ ಸಂಸ್ಥೆಯಾಗಿ ಪ್ರಾರಂಭವಾದ ಯತಿಕಾರ್ಪ್, 2019ರಲ್ಲಿ ಕಾರ್ಪೊರೇಟ್ ಜಗತ್ತಿಗೆ ಕಾಲಿಟ್ಟಿತು. ಸರಕಾರಿ ಇಲಾಖೆ ಹಾಗೂ ಸಂಸ್ಥೆಗಳು, ಬಹು ರಾಷ್ಟ್ರೀಯ ಕಂಪನಿಗಳಿಗೆ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಒದಗಿಸುವ ಮೂಲಕ ಯತಿಕಾರ್ಪ್ ಗುರುತಿಸಿಕೊಂಡಿದೆ. ಪ್ರಸ್ತುತ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಎತ್ತಿಕಾರ್ ಸಂಸ್ಥೆ ಸಾಮಾನ್ಯ ಜನರಿಗೂ ಎಐ ತಂತ್ರಜ್ಞಾನದ ಪ್ರಯೋಜನಗಳನ್ನು ತಲುಪಿಸುವ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
ನೋಂದಣಿ: ಆಯಾ ತಾಲೂಕಿನ ಅಭ್ಯರ್ಥಿಗಳು ನೇರವಾಗಿ ಸಂಸ್ಥೆಯ ವೆಬ್ಸೈಟ್ https://yaticorp.com/ai-career/ ಮೂಲಕ ನೋಂದಾಯಿಸಬಹುದಾಗಿದೆ.
0 Comments