ದುಬೈ ಅಂತಾರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ -2025, ರೆನ್ಶಿ ಯೋಗ ಸಂಸ್ಥೆ ದುಬೈ, ಯುಎಇ ಹಾಗೂ
ಅವಿನಾಶ್ ಯೋಗ ಮತ್ತು ಏರೋಬಿಕ್ಸ್
ಸಂಸ್ಥೆ ಬೆಂಗಳೂರು ಸಹಯೋಗದೊಂದಿಗೆ ಮೇ 09 ರಿಂದ 12 ರವರೆಗೆ ದುಬೈಯಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕು. ಅಕ್ಷಯ ಬಾಬ್ಲುಬೆಟ್ಟು (ಏನೇಕಲ್ಲು ) ಚಿನ್ನದ ಪದಕ ಗಳಿಸಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಏನೇಕಲ್ಲು ಇಲ್ಲಿ 05 ನೇ ತರಗತಿಯಲ್ಲಿ ಕು. ಅಕ್ಷಯ ವ್ಯಾಸಂಗ ಮಾಡುತ್ತಿದ್ದಾಳೆ. ನಿರಂತರ ಯೋಗ ಕೇಂದ್ರ ಏನೇಕಲ್ಲು ಇಲ್ಲಿಯ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರ ಜೊತೆಯಲ್ಲಿ ಯೋಗ ಶಿಕ್ಷಣದ ಮಾರ್ಗದರ್ಶನ ವನ್ನು ಪಡೆಯುತ್ತಿದ್ದಾರೆ.
ಕು. ಅಕ್ಷಯ ಏನೇಕಲ್ಲು ನಿವಾಸಿ ಶ್ರೀ ಮೋಹನ್ ಕುಮಾರ್ ಮತ್ತು ಶ್ರೀಮತಿ ದಿವ್ಯ ಕುಮಾರಿ ರವರ ಪುತ್ರಿ. ಊರಿನವರ ಸಹಕಾರದಿಂದ ಭಾಗವಹಿಸಿ ಚಿನ್ನದ ಪದಕ ಗಳಿಸಿರುವುದು ಹೆತ್ತವರಿಗೆ ಮತ್ತು ಊರಿನವರಿಗೆ ಬಹಳ ಸಂತೋಷವನ್ನು ತಂದು ಕೊಟ್ಟಿದೆ.
0 Comments