ಈ ನಿರ್ಧಾರವನ್ನು ಇಪಿಎಫ್ಒ ಸಂಸ್ಥೆಯ ಕೇಂದ್ರೀಯ ಟ್ರಸ್ಟ್ ಗಳ ಮಂಡಳಿ (ಸಿಬಿಟಿ) ಕಾರ್ಯಕಾರಿ ಸಮಿತಿಯ 113ನೇ ಸಭೆಯಲ್ಲಿ ಅನುಮೋದಿಸಲಾಗಿದೆ. ಇದರಿಂದಾಗಿ ಪಿಎಫ್ ಹಿಂಪಡೆಯುವ ಪ್ರಕ್ರಿಯೆ ಮತ್ತಷ್ಟು ಸರಳವಾಗಲಿದೆ. ಇದರ ಜೊತೆಗೆ ಪಿಎಫ್ ಹಣವನ್ನು ಹಿಂಪಡೆಯಲು ಯುಪಿಐ ಸೌಲಭ್ಯವನ್ನು ಸಹ ಪರಿಚಯಿಸಲು ಉದ್ದೇಶಿಸಲಾಗಿದೆ. ಇದು ಸೆಟ್ಲ್ಮೆಂಟ್ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇನ್ನು ಮುಂದೆ ಕ್ಲೈಂ ಸೆಟಲ್ಮೆಂಟ್ ಸಮಯವೂ 10 ದಿನಗಳಿಂದ 3 ದಿನಗಳಿಗೆ ಇಳಿಕೆಯಾಗಲಿದೆ. ಇದು ನೌಕರರಿಗೆ ಅವರ ತುರ್ತು ಸಂದರ್ಭಗಳಲ್ಲಿ ಪಿಎಫ್ ಹಣವನ್ನು ತ್ವರಿತವಾಗಿ ಪಡೆಯಲು ತುಂಬಾನೇ ಸಹಾಯ ಮಾಡುತ್ತದೆ.
2020ರ ಏಪ್ರಿಲ್ ನಲ್ಲಿ ವೈದ್ಯಕೀಯ ಉದ್ದೇಶಕ್ಕಾಗಿ ಸ್ವಯಂ ಕ್ಲೈಂ ಸೆಟ್ಲ್ಮೆಂಟ್ ಪ್ರಾರಂಭಿಸಲಾಗಿತ್ತು. ನಂತರ ಇದನ್ನು ಶಿಕ್ಷಣ, ಮದುವೆ ಮತ್ತು ವಸತಿಗೂ ವಿಸ್ತರಿಸಲಾಯಿತು. ಇಪಿಎಫ್ಒ ಆಟೊ ಸೆಟ್ಲ್ಮೆಂಟ್ ವ್ಯವಸ್ಥೆಯಲ್ಲಿ ಮಾನವನ ಸಹಾಯವಿಲ್ಲದೆ ಸ್ವಯಂ ಚಾಲಿತವಾಗಿ ಕ್ಲೈಮ್ ಗಳನ್ನು ವಿಲೆವಾರಿ ಮಾಡಲಾಗುತ್ತದೆ.
0 Comments