ಮತ್ತೆ ರೆಪೊ ದರ ಇಳಿಸಿದ ಆರ್.ಬಿ.ಐ..!!

ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿ ಸಭೆಯು ಇಂದು ಮುಕ್ತಾಯಗೊಂಡಿದ್ದು, ಈ ಸಭೆಯಲ್ಲಿ ಆರ್ಬಿಐ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ಸಭೆಯ ನಂತರ ಆರ್ ಬಿ ಐ ಗವರ್ನರ್ ಸಂಜಯ್ ಮಲ್ಹೋತ್ರ ಅವರು ಮಹತ್ವದ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ್ದು ಪ್ರಸ್ತುತ ಇದ್ದ ರೆಪೊ ದರ (6.25%)ವನ್ನು 0.25% ಇಳಿಕೆ ಮಾಡುವ ಮೂಲಕ 6%ಕ್ಕೆ ಇಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಫೆಬ್ರವರಿ ತಿಂಗಳಲ್ಲಿ ರೆಪೋ ದರ ಇಳಿಕೆ ಮಾಡಿತ್ತು. ಇದರ ಬೆನ್ನಲ್ಲೇ ಇಂದು ನಡೆದ ಎಂಪಿಸಿ ಸಭೆಯಲ್ಲಿ ಸರ್ವಾನುಮತದಿಂದ ರೆಪೋ ದರ ಇಳಿಕೆಗೆ ಮತ ಚಲಾವಣೆಯಾದ ಬೆನ್ನಲ್ಲೇ ಆರ್ಬಿಐ ಗವರ್ನರ್ ಮಲ್ಹೋತ್ರ ಈ ಸಿಹಿ ಸುದ್ದಿಯನ್ನು ರಾಷ್ಟ್ರದ ಜನತೆಗೆ ತಿಳಿಸಿದ್ದಾರೆ. ರೆಪೋ ದರ ಇಳಿಕೆಯಿಂದ ಗೃಹ ಸಾಲ, ಇಎಂಐ ಮೇಲಿನ ಬಡ್ಡಿದರಗಳು ಮತ್ತಷ್ಟು ಇಳಿಕೆಯಾಗಲಿದೆ.

ರಿಪೋ ದರ ಕಡಿತಗೊಳಿಸುವ ಜೊತೆಗೆ, ಎಸ್ಡಿಎಫ್ ಮತ್ತು ಎಂಎಸ್ಎಫ್ ದರಗಳನ್ನೂ ತುಸು ಇಳಿಸಲಾಗಿದೆ. ಪಾಲಿಸಿ ನಿಲುವನ್ನು ನ್ಯೂಟ್ರಲ್ನಿಂದ ಅಕಾಮೊಡೇಟಿವ್ಗೆ ಬದಲಿಸಲಾಗಿದೆ.

ಸಂಜಯ್ ಮಲ್ಹೋತ್ರಾ ಅವರು ಆರ್ಬಿಐ ಗವರ್ನರ್ ಆಗಿ ನೇಮಕವಾದ ಬಳಿಕ ಇದು ಎರಡನೇ ಎಂಪಿಸಿ ಸಭೆಯಾಗಿದೆ. ಹೊಸ ಹಣಕಾಸು ವರ್ಷದ ಮೊದಲ ಎಂಪಿಸಿ ಸಭೆಯೂ ಇದಾಗಿದೆ. 

Post a Comment

0 Comments