2023ರ ಜನವರಿ ಮತ್ತು 2024ರ ಡಿಸೆಂಬರ್ ವರೆಗೆ ಅಂದರೆ ಈ ಎರಡು ವರ್ಷಗಳ ಒಳಗೆ ಪ್ರಕಟವಾಗಿರುವ ಕೃತಿಗಳನ್ನು ಕಾವ್ಯಾನಂದ ಪುರಸ್ಕಾರಕ್ಕೆ ಪರಿಗಣಿಸಲಾಗುತ್ತದೆ. ಈ ಪುರಸ್ಕಾರವು 50,000 ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ಆಸಕ್ತರು ತಮ್ಮ ಕೃತಿಯ ಮೂರು ಪ್ರತಿಗಳನ್ನು ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್, ಶ್ರೀ ಗಿರಿ, 4/5ಎ, ಅಲಿ ಅಸ್ಕರ್ ರಸ್ತೆ, ಬೆಂಗಳೂರು-560052, ಈ ವಿಳಾಸಕ್ಕೆ ಜೂನ್ 30ರ ಒಳಗಾಗಿ ಕಳುಹಿಸಿಕೊಡಬೇಕೆಂದು ಟ್ರಸ್ಟ್ ಅಧ್ಯಕ್ಷ ವಿಜಯಾ ನಂದೀಶ್ವರ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 080 22264361 ಸಂಪರ್ಕಿಸಬಹುದಾಗಿದೆ.
0 Comments