2024ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಅತ್ಯುತ್ತಮ ಕಾದಂಬರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಿದ್ದು, ಇದರಲ್ಲಿ 75,000 ರೂಪಾಯಿ ಲೇಖಕರಿಗೆ ಹಾಗೂ 25,000 ರೂಪಾಯಿ ಪ್ರಕಾಶಕರಿಗೆ ನೀಡಲಾಗುತ್ತದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5,000 ರೂಪಾಯಿ ಬಹುಮಾನವಿದ್ದು, ಈ ಪೈಕಿ 3000 ರೂಪಾಯಿ ಲೇಖಕರಿಗೆ ಹಾಗೂ 2,000 ರೂಪಾಯಿ ಪ್ರಕಾಶಕರಿಗೆ ವಿತರಿಸಲಾಗುತ್ತದೆ.
ಈ ಕಥಾಸ್ಪರ್ಧೆಗೆ ಅಪ್ಪ್ರಕಟಿತ ಕಥೆಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಪ್ರಥಮ ಸ್ಥಾನ ಪಡೆಯುವ ಕಥೆಗೆ 50,000 ರೂಪಾಯಿ, ದ್ವಿತೀಯ ಸ್ಥಾನ ಪಡೆಯುವ ಕಥೆಗೆ 25,000 ರೂಪಾಯಿ, ತೃತೀಯ ಸ್ಥಾನ ಪಡೆಯುವ ಕಥೆಗೆ 15,000 ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಉಳಿದಂತೆ ಐದು ಕಥೆಗಳಿಗೆ ತಲಾ 5,000 ರೂಪಾಯಿ ನಗದನ್ನು ಒಳಗೊಂಡಂತೆ ಸಮಾಧಾನಕರ ಬಹುಮಾನ ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾಗುವ ಉಳಿದ 15 ಕಥೆಗಳಿಗೆ ತಲಾ 2,000 ರೂಪಾಯಿ ನೀಡಲಾಗುತ್ತದೆ. ಅಂತಿಮವಾಗಿ ಆಯ್ಕೆಯಾಗುವ ಒಟ್ಟು ಈ 25 ಕಥೆಗಳನ್ನು ಒಳಗೊಂಡ ಪುಸ್ತಕವನ್ನು ಪ್ರಕಟಿಸಲಾಗುತ್ತದೆ.
ಕಾದಂಬರಿಗಳನ್ನು ಕಳುಹಿಸಲು ಮೇ 1 ಮತ್ತು ಕಥೆಗಳನ್ನು ಕಳುಹಿಸಲು ಮೇ 15ನೇ ತಾರೀಕು ಕೊನೆಯ ದಿನವಾಗಿರುತ್ತದೆ. ಕಥೆಗಳನ್ನು ಇ-ಮೇಲ್ ಮೂಲಕ ನುಡಿ ಅಥವಾ ಯುನಿಕೋಡ್ ಫಾಂಟ್ ಬಳಸಿ ಟೈಪ್ ಮಾಡಿದ ಪ್ರತಿಯನ್ನು bbks.2025@bookbrahma.com ಅಥವಾ ಹಸ್ತ ಪ್ರತಿಯನ್ನು ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ ಕನ್ನಡ ಮೂರನೇ ಮಹಡಿ, ಆರ್ ಕೆ ಕಾಂಪ್ಲೆಕ್ಸ್, ಕೆ ಎಸ್ ಎಸ್ ಐ ಡಿ ಸಿ ಆವರಣ, ಎಲೆಕ್ಟ್ರಾನಿಕ್ ಸಿಟಿ ಮೊದಲ ಹಂತ, ಆದರೆ ಬೆಂಗಳೂರು- 560100 ಈ ವಿಳಾಸಕ್ಕೆ ಕಳುಹಿಸಿ ಕೊಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
0 Comments