ಕೇಂದ್ರ ಸರಕಾರವು "ಒಂದು ರಾಜ್ಯ; ಒಂದು ಆರ್.ಆರ್.ಬಿ"ಎಂಬ ತತ್ವವನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಬ್ಯಾಂಕುಗಳ ಪರಿಣಾಮಕಾರಿ ಕಾರ್ಯಾಚರಣೆ ಮತ್ತು ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಈ ವಿಲೀನ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಆಂಧ್ರಪ್ರದೇಶದಲ್ಲಿ ನಾಲ್ಕು ಗ್ರಾಮೀಣ ಬ್ಯಾಂಕುಗಳು ಕಾರ್ಯಾಚರಿಸುತ್ತಿವೆ. ಹಾಗೆಯೇ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ತಲಾ ಮೂರು, ಬಿಹಾರ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಓಡಿಸಾ ಮತ್ತು ರಾಜಸ್ಥಾನದಲ್ಲಿ ತಲಾ ಎರಡು ಗ್ರಾಮೀಣ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ.
ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರು, ಸಣ್ಣ ರೈತರು ಮತ್ತು ಕುಶಲಕರ್ಮಿಗಳಿಗೆ ಸಾಲ ಸೇರಿ ಇತರೆ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವುದು ಆರ್.ಆರ್.ಬಿ ಗಳ ಜವಾಬ್ದಾರಿಯಾಗಿದೆ. ಪ್ರಸ್ತುತ ಈ ಬ್ಯಾಂಕ್ ಗಳಲ್ಲಿ ಕೇಂದ್ರ ಶೇಕಡ 50, ಪ್ರಾಯೋಜಕ ಬ್ಯಾಂಕುಗಳು ಶೇಕಡ 35 ಮತ್ತು ರಾಜ್ಯ ಸರ್ಕಾರಗಳು ಶೇಕಡಾ 15 ರಷ್ಟು ಷೇರು ಪಾಲು ಹೊಂದಿವೆ.
20 21-22 ರಲ್ಲಿ ಕೇಂದ್ರವು ಈ ಬ್ಯಾಂಕ್ಗಳ ಬಲವರ್ಧನೆಗೆ ಮುಂದಾಗಿತ್ತು. ಇದಕ್ಕೆ ಪೂರಕವಾಗಿ ಎರಡು ವರ್ಷದವರೆಗೆ ಅವುಗಳ ಬಂಡವಾಳ ವೃದ್ಧಿಗೆ ₹5,445 ಕೋಟಿ ನೆರವು ಕಲ್ಪಿಸಿತ್ತು. ಇದರಿಂದ 2023-24 ರಲ್ಲಿ ಬ್ಯಾಂಕಗಳ ಬಂಡವಾಳ ಹೆಚ್ಚಳವಾಗಿತ್ತು ಈ ಅವಧಿಯಲ್ಲಿ 7,571 ಕೋಟಿ ರೂಪಾಯಿ ನಿವಳ ಲಾಭಗಳಿಸಿದ್ದು ಚಾರಿತ್ರಿಕ ದಾಖಲೆಯಾಗಿತ್ತು.
ಬ್ಯಾಂಕುಗಳು ಅನಿರೀಕ್ಷಿತ ನಷ್ಟಕ್ಕೆ ತುತ್ತಾದಾಗ ಎದುರಿಸಲು ಹೊಂದಿರುವ ಸಮರ್ಪಕ ಬಂಡವಾಳ ಅನುಪಾತವು ಸಿ ಎ ಆರ್ ಕಳೆದ ವರ್ಷದ ಮಾರ್ಚ್ ಅಂತ್ಯಕ್ಕೆ ಶೇಕಡಾ 14.2ಕ್ಕೆ ಮುಟ್ಟಿರುವುದು ದಾಖಲೆಯಾಗಿದೆ.
ಆರ್ ಆರ್ ಬಿ ಗಳ ವಿಲೀನಕ್ಕೆ ಕೇಂದ್ರವು 2004-05ರಲ್ಲಿ ಚಾಲನೆ ನೀಡಿತ್ತು. ಆಗ ಒಟ್ಟು 196 ಬ್ಯಾಂಕುಗಳಿದ್ದವು. ಅದನ್ನು ವಿಲೀನಗೊಳಿಸಿ 2020- 21ನೇ ಸಾಲಿನಲ್ಲಿ 43ಕ್ಕೆ ಇಳಿಕೆ ಮಾಡಿತ್ತು.
0 Comments