ಅರಬ್ಬಿ ಸಮುದ್ರದಲ್ಲಿ ಹಾರಾಟ ನಡೆಸಿದ "ಬ್ರಹ್ಮೋಸ್..!"

ಭಾರತೀಯ ನೌಕಾಪಡೆಯಲ್ಲಿನ ಯುದ್ಧ ನೌಕೆಗಳು ಅರಬ್ಬಿ ಸಮುದ್ರದಲ್ಲಿ ನನ್ನ ರೀತಿಯ ಯುದ್ಧ ನೌಕೆ ನಿರೋಧಕ ಕ್ಷಿಪಣಿಗಳನ್ನು ಹಾರಿಸುವ ಮೂಲಕ ದೀರ್ಘ ಶ್ರೇಣಿಯ ನಿಖರ ದಾಳಿಗೆ ಅಭ್ಯಾಸವನ್ನು ಸರ್ವಸನ್ನದ್ದತೆಯೊಂದಿಗೆ ನಡೆಸುತ್ತಿವೆ. ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಲು ಪಾಕಿಸ್ತಾನವು ತನ್ನ ಸೈನಿಕರಿಗೆ ಸೂಚನೆ ನೀಡುವ ಮೊದಲೇ ಭಾರತೀಯ ನೌಕಾಪಡೆ ಈ ಕ್ರಮ ಕೈಗೊಂಡಿದೆ. 
ಕೊಲ್ಕತ್ತಾ ಶ್ರೇಣಿಯ ಡೆಸ್ಟ್ರಾಯರ್, ನೀಲಗಿರಿ, ಕ್ರಿವಾಕ್ ಹಾಗೂ ಐಎನ್ಎಸ್ ಸೂರತ್ ಯುದ್ಧ ನೌಕೆಗಳಿಂದ ಬ್ರಹ್ಮೋಸ್ ಹಡಗು ನಿರೋಧಕ ಹಾಗೂ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಲಾಗಿದೆ. ದೀರ್ಘ ಶ್ರೇಣಿಯ ನಿಖರ ಆಕ್ರಮಣಕಾರಿ ದಾಳಿಗೆ ಭಾರತೀಯ ನೌಕಾಪಡೆಯಲ್ಲಿರುವ ವ್ಯವಸ್ಥೆ, ಸಿಬ್ಬಂದಿಗಳ ಸರ್ವಸನ್ನದ್ದತೆಯನ್ನು ಮರು ಮೌಲ್ಯಮಾಪನ ಮಾಡುವ ಉದ್ದೇಶದಿಂದ ಕ್ಷಿಪಣಿಗಳ ಹಾರಾಟ ಪ್ರದರ್ಶನ ನಡೆಸಲಾಗಿದೆ. 

ಯಾವುದೇ ಸಮಯದಲ್ಲಿ, ಎಲ್ಲಾದರೂ ಮತ್ತು ಹೇಗಾದರೂ ರಾಷ್ಟ್ರಧ ಕರಾವಳಿ ಭಾಗದ ಹಿತಾಸಕ್ತಿಗಳನ್ನು ಕಾಪಾಡಲು ಭಾರತೀಯ ನೌಕಾಪಡೆ ಸಿದ್ಧವಾಗಿದೆ ಎಂದು ಭಾರತೀಯ ನೌಕಾಪಡೆ ತನ್ನ ಆನ್ಲೈನ್ ಪೋಸ್ಟ್ ನಲ್ಲಿ ತಿಳಿಸಿದೆ. ಫಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ ನಿರಂತರವಾಗಿ ಕ್ಷಿಪಣಿ ಹಾರಿಸುತ್ತಿರುವ ಬಗ್ಗೆ ವರದಿಯಾಗಿದೆ.

Post a Comment

0 Comments