ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ..!!

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಉದ್ಯಮವಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಖಾಲಿ ಇರುವಂತಹ 150 ಮೇಂಟೆನರ್ ಹುದ್ದೆಗಳ ಭರ್ತಿಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇ 22ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ 10+ಐಟಿಐ (ಎಲೆಕ್ಟ್ರಾನಿಕ್ಸ್/ಇನ್ಸ್ಟ್ರುಮೆಂಟ್ ಮೆಕ್ಯಾನಿಕ್/ಎಲೆಕ್ಟ್ರಾನಿಕಲ್ ಮೆಕ್ಯಾನಿಕ್/ವಯರ್ ಮ್ಯಾನ್/ಫಿಟ್ಟರ್/ಮೆಕ್ಯಾನಿಕ್ ಕಂಪ್ಯೂಟರ್ ಹಾರ್ಡ್ವೇರ್/ಮೆಕ್ಯಾನಿಕ್ ಇಂಡಸ್ಟ್ರಿಯಲ್ಸ್/ಇನ್ಫಾರ್ಮಶನ್ ಟೆಕ್ನಾಲಜಿ ಅಂಡ್ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಸೇರಿ ವಿವಿಧ ಟ್ರೇಡ್ ಗಳಲ್ಲಿ ಎರಡು ವರ್ಷದ ಐಟಿಐ ಪೂರ್ಣಗೊಳಿಸಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 50 ವರ್ಷದೊಳಗಿರಬೇಕು. 

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ವಾರ್ಷಿಕ ಶೇಕಡಾ 3 ಹೆಚ್ಚಳದೊಂದಿಗೆ 25, 000- 59, 060ರೂ ಎಂದು ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಗೊಳಿಸಿ ಅರ್ಹರನ್ನು 100 ಅಂಕಗಳ ನಿಖಿತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ. ಪರೀಕ್ಷೆಯಲ್ಲಿ ಆಯ್ಕೆ ಆದವರಿಗೆ ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ಗಳಿಸುವ ಮೂಲಕ ಅಂತಿಮ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಬಿಡುಗಡೆಗೊಳಿಸಲಾಗುತ್ತದೆ. ನೇಮಕಾತಿ ಹಂತದಲ್ಲಿ ಅಭ್ಯರ್ಥಿ ಸಂಖ್ಯೆ ಪರಿಗಣಿಸಿ ಹೆಚ್ಚುವರಿ ಲಿಖಿತ/ಕೌಶಲ/ಸಂದರ್ಭದಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. 

ಆಸಕ್ತ ಅಭ್ಯರ್ಥಿಗಳು www.bmrc.co.in ವೆಬ್ಸೈಟ್ ಗೆ ಆನ್ಲೈನ್ ನಲ್ಲಿಯೇ ಅರ್ಜಿ ಭರ್ತಿ ಮಾಡಬೇಕು. ಭರ್ತಿ ಮಾಡಿರುವ ಅರ್ಜಿಯ ಮುದ್ರಿತ ಪ್ರತಿಗೆ ಪಾಸ್ಪೋರ್ಟ್ ಅಳತೆ ಫೋಟೋ ಹಾಗೂ ಅಗತ್ಯ ದಾಖಲೆಯನ್ನು ಲಗತ್ತಿಸಿ ಅಂಚೆ ಲಕೋಟೆಯಲ್ಲಿ ಹುದ್ದೆಯ ಹೆಸರನ್ನು ನಮೂದಿಸಿ "ದಿ ಜನರಲ್ ಮ್ಯಾನೇಜರ್ (ಎಚ್ಆರ್) ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್, ಮೂರನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಶಾಂತಿನಗರ ಬೆಂಗಳೂರು-560027"ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮುಖಾಂತರ ಮೇ 27ರೊಳಗೆ ತಲುಪಿಸಬೇಕು. ಆನ್ಲೈನಲ್ಲಿ ಅರ್ಜಿ ಭರ್ತಿ ಮಾಡಲು ಮೇ 22ರ ವರೆಗೆ ಮಾತ್ರ ಅವಕಾಶವಿರುತ್ತದೆ.

ವಿವರಣೆ ಮತ್ತು ಹೆಚ್ಚಿನ ಮಾಹಿತಿಗಾಗಿ helpdesk@bmrc.co.in ಸಂಪರ್ಕಿಸಬಹುದು.


Post a Comment

0 Comments