ಬುಡಕಟ್ಟು ವಿದ್ಯಾರ್ಥಿಗಳಿಗೆ ಐಐಎಸ್‌ಸಿ ಯಲ್ಲಿ ತರಬೇತಿ..!!

ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಬುಡಕಟ್ಟು ಸಂಶೋಧನೆ ಮಾಹಿತಿ, ಶಿಕ್ಷಣ, ಸಂವಹನ ಮತ್ತು ಕಾರ್ಯಕ್ರಮದ ಅನ್ವಯ "ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಅಂಡ್ ಕ್ಯಾರೆಕ್ಟರೈಜೇಶನ್ ಟ್ರೈನಿಂಗ್ ಪಾರ್ ಸ್ಟೂಡೆಂಟ್ಸ್ ಫ್ರಮ್ ಟ್ರೈಬಲ್ ಕಮ್ಯುನಿಟಿ" ಪ್ರಾಜೆಕ್ಟ್ ನಲ್ಲಿ ತರಬೇತಿ ನೀಡಲಿದೆ. ಇದಕ್ಕಾಗಿ ೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಐಐಎಸ್‌ಸಿಗೆ ಜವಾಬ್ದಾರಿ ನೀಡಲಾಗಿದೆ.
ಫ್ಯಾಬ್ರಿಕೇಷನ್ ಕ್ಷೇತ್ರದಲ್ಲಿ ಪ್ರಗತಿ ಹೊಂದುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಕೌಶಲಯುತ ಮಾನವ ಸಂಪನ್ಮೂಲವನ್ನು ರೂಪಿಸುವ ಉದ್ದೇಶದಿಂದ ಈ ತರಬೇತಿ ನೀಡಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ. ಒಟ್ಟಾರೆ ಮೂರು ವರ್ಷಗಳ ತರಬೇತಿ ಕಾರ್ಯಕ್ರಮ ಇದಾಗಿದೆ.

1500 ಜನರಿಗೆ ಪ್ರಾಥಮಿಕ ಹಂತದ ಹಾಗೂ 600 ಜನರಿಗೆ ಉನ್ನತ ಮಟ್ಟದ ತರಬೇತಿ ದೊರೆಯಲಿದೆ. ಫೌಂಡೇಶನ್ ಟ್ರೈನಿಂಗ್ ಆನ್ಲೈನ್ ಸ್ವರೂಪದಲ್ಲಿದ್ದು, ಅಡ್ವಾನ್ಸ್ ಟ್ರೈನಿಂಗ್ ಅನ್ನು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ನೀಡಲಾಗುತ್ತದೆ. 

ತರಬೇತಿಗೆ ಪ್ರಾಥಮಿಕ ಹಂತಕ್ಕೆ ಪದವಿಯಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದವರು ಅಥವಾ ಎಂ ಎಸ್ ಸಿ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿರುವವರಿಗೆ 60 ತಾಸುಗಳ ತರಬೇತಿ ಅವಧಿ ನಿಗದಿ ಮಾಡಲಾಗಿದೆ. ಉನ್ನತ ಮಟ್ಟದ ತರಬೇತಿಗೆ ಇಂಜಿನಿಯರಿಂಗ್, ಎಂ ಎಸ್ ಸಿ ಪದವೀಧರರ ಜೊತೆಗೆ ಫೌಂಡೇಶನ್ ಹಂತದ ತರಬೇತಿ ಪೂರ್ಣಗೊಳಿಸಿದವರಿಗೂ ನೀಡಲಾಗುತ್ತದೆ. ಇದು 90 ತಾಸುಗಳ ಕಲಿಕಾ ಅವಧಿಯನ್ನು ಹೊಂದಿದೆ.

ಅರ್ಜಿ ಸಲ್ಲಿಕೆ ಹಾಗೂ ನೋಂದಣಿಗಾಗಿ ಈ ಲಿಂಕ್ ಪರಿಶೀಲಿಸಬಹುದಾಗಿದೆ. bit.ly/4IMCk04

Post a Comment

0 Comments