ಮೌಂಟ್ ಎವರೆಸ್ಟ್ ಪರ್ವತಾರೋಹಣಕ್ಕೆ 53 ದೇಶಗಳ 402 ಮಂದಿಗೆ ಅವಕಾಶ..!!‌

ಜಗತ್ತಿನ ಅತಿ ಎತ್ತರದ ಶಿಖರವೆನಿಸಿಕೊಂಡಿರುವ ಮೌಂಟ್ ಎವರೆಸ್ಟ್ ಏರಲು ಅದೆಷ್ಟು ಜನರಿಗೆ ಕನಸು ಇರಲ್ಲ ಹೇಳಿ..!! ಈ ಬಾರಿಯ ಮೌಂಟ್ ಎವರೆಸ್ಟ್ ಶಿಖರ ಇರಲು ಒಟ್ಟು ಜಗತ್ತಿನ 53 ದೇಶಗಳ 402 ಪರ್ವತಾರೋಹಿಗಳಿಗೆ ಅನುಮತಿ ನೀಡಲಾಗಿದೆ. ನೇಪಾಳದ ಪ್ರವಾಸೋದ್ಯಮ ಇಲಾಖೆಯೂ ನೀಡಿರುವ ಮಾಹಿತಿ ಪ್ರಕಾರ ಇದರಲ್ಲಿ 74 ಮಂದಿ ಮಹಿಳೆಯರು ಸೇರಿದ್ದಾರೆ.
ಸುಮಾರು 8,848.86 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನೇರಲು ನೇಪಾಳ ಪ್ರವಾಸೋದ್ಯಮ ಇಲಾಖೆಯು ಇಲ್ಲಿಯವರೆಗೆ 41 ಬಾರಿ ಅವಕಾಶವನ್ನು ನೀಡಿದೆ. ಕಳೆದ ವರ್ಷ ಈ ಅವಧಿಯಲ್ಲಿ 75 ಮಹಿಳೆಯರು ಮತ್ತು 330 ಪುರುಷರು ಸೇರಿ ಒಟ್ಟು 414 ಮಂದಿ ಶಿಖರವನ್ನೇರಲು ಅವಕಾಶ ಪಡೆದುಕೊಂಡಿದ್ದರು.

ಈ ವರ್ಷ ನೇಪಾಳ ಸರಕಾರಕ್ಕೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಬೇರೆ ಬೇರೆ ಶಿಖರವನ್ನು ಏರಲು ಅನುಮತಿಗಾಗಿ ಪರ್ವತಾರೋಹಿಗಳು ಪಾವತಿಸುವ ಪ್ರವೇಶ ಶುಲ್ಕದಿಂದ ಸುಮಾರು 68.4 ಕೋಟಿ ರೂಪಾಯಿ ಗೌರವಧನ ಸಂಗ್ರಹವಾಗಿದೆ. ಅದರಲ್ಲೂ ಮೌಂಟ್ ಎವರೆಸ್ಟ್ ಶಿಖರವನ್ನು ಏರಲು ನೀಡಿದ ಗೌರವಧನದ ಒಟ್ಟು ಮೊತ್ತವು 59.5 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ನೇಪಾಲ ಸರಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಅತೀ ಎತ್ತರದ ಮೌಂಟ್ ಎವರೆಸ್ಟ್ ಶಿಖರದ ಪರ್ವತಾರೋಹಣವನ್ನು ಇಲ್ಲಿಯವರೆಗೆ ನೇಪಾಳಿಗರು ಮತ್ತು ವಿದೇಶಿಗರು ಸೇರಿ ಒಟ್ಟು 8,000 ಪರ್ವತಾರೋಹಿಗಳು ಕೈಗೊಂಡಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

Post a Comment

0 Comments