ನೌಕರರ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್ಒ ಮುಖ ರ ಧೃಡೀಕರಣವನ್ನು ಬಳಸಿಕೊಂಡು ಯುಎಎನ್ ಹಂಚಿಕೆ ಮತ್ತು ಸಕ್ರಿಯಗೊಳಿಸುವಿಕೆಗಾಗಿ ವರ್ದಿತ ಡಿಜಿಟಲ್ ಸೇವೆಗಳನ್ನು ಪರಿಚಯಿಸಿದೆ. ಇದು ಈ ಸಂಸ್ಥೆಗಳಲ್ಲಿ ಚಂದಾದಾರರಾಗಿರುವ ಕೋಟ್ಯಂತರ ಸದಸ್ಯರಿಗೆ ಸಂಪರ್ಕ ರಹಿತ, ಸುರಕ್ಷಿತ ಮತ್ತು ಸಂಪೂರ್ಣ ಡಿಜಿಟಲ್ ಸೇವಾ ವಿತರಣೆಯ ಮಹತ್ವದ ಹೆಜ್ಜೆಯಾಗಿದೆ.
ಈಗ ಉದ್ಯೋಗಿಗಳು ಉಮಂಗ್ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಆಧಾರ್ ಫೇಸ್ ಆಥೆಂಟಿಕೇಷನ್ ಟೆಕ್ನಾಲಜಿ (ಎಫ್ಎಟಿ) ಮೂಲಕ ನೇರವಾಗಿ ಯುಎಎನ್ ಅನ್ನು ರಚಿಸಬಹುದಾಗಿದೆ. ಯಾವುದೇ ಹೊಸ ಉದ್ಯೋಗಿಗೆ ಆಧಾರ್ ಫೇಸ್ ಅಥೆಂಟಿಕೇಶನ್ ಟೆಕ್ನಾಲಜಿ ಬಳಸಿ ಯುಎಎನ್ ರಚಿಸಲು ಯಾವುದೇ ಉದ್ಯೋಗದಾತರು ಅದೇ ಉಮಂಗ್ ಅಪ್ಲಿಕೇಶನ್ ಅನ್ನು ಬಳಸಬಹುದು.
ಯುಎಎನ್ ಅನ್ನು ರಚಿಸಲು ಉದ್ಯೋಗಿಯು ಉಮಂಗ್ ಅಪ್ಲಿಕೇಶನ್ ನಲ್ಲಿ ಮುಖ ದೃಷ್ಟಿಕರಣದ ಮೂಲಕ ಯುಎಎನ್ ಹಂಚಿಕೆ ಮತ್ತು ಸಕ್ರಿಯಗೊಳಿಸುವಿಕೆಯ ಹಂತಗಳನ್ನು ಅನುಸರಿಸಬೇಕು. ಆಧಾರ್ ಆಧಾರಿತ ಪರಿಶೀಲನೆಯ ನಂತರ ಯುಎಎನ್ ಅನ್ನು ರಚಿಸಲಾಗುತ್ತದೆ ಮತ್ತು ಆಧಾರ್ ಡೇಟಾಬೇಸ್ ಅಲ್ಲಿ ಉಲ್ಲೇಖಿಸಲಾಗಿರುವ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಸಂದೇಶ ಕಳುಹಿಸಲಾಗುತ್ತದೆ.
ಜನಸಂಖ್ಯೆ ಅಥವಾ ಒಟಿಪಿ ಆಧಾರಿತ ದೃಢೀಕರಣದಂತಹ ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಮುಖ ದೃಢೀಕರಣವನ್ನು ಬಳಸಿಕೊಂಡು ಬಯೋಮೆಟ್ರಿಕ್ ದೃಢೀಕರಣ ಹೆಚ್ಚಿನ ಮಟ್ಟದ ಭದ್ರತೆಯನ್ನು ಒದಗಿಸುತ್ತದೆ.
0 Comments