ಯುಪಿಐ ಪಾವತಿ ಮಿತಿ ಪರಿಷ್ಕರಣೆ ಅಧಿಕಾರವನ್ನು ಎನ್.ಪಿ.ಸಿ.ಐಗೆ ನೀಡಿದ ಆರ್.ಬಿ.ಐ..!!

ಯುಪಿಐ ಬಳಸಿ ಗ್ರಾಹಕರು ವ್ಯಾಪಾರಿಗಳಿಗೆ ಪಾವತಿಸುವ ಹಣದ ಮಿತಿಯನ್ನು ಪರಿಷ್ಕರಿಸುವ ಅಧಿಕಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ರಾಷ್ಟ್ರೀಯ ಪಾವತಿ ನಿಗಮ(ಎನ್.ಪಿ.ಸಿ.ಐ)ಕ್ಕೆ ನೀಡಿದೆ.
ಪ್ರಸ್ತುತ ಯುಪಿಐ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ಗ್ರಾಹಕನಿಂದ ವರ್ತಕನಿಗೆ ಪಾವತಿಸುವ ಹಣದ ಮಿತಿಯು ಒಂದು ಲಕ್ಷವಿದೆ. ಕೆಲವೊಂದು ನಿರ್ದಿಷ್ಟ ಪ್ರಕರಣಗಳಲ್ಲಿ ಎರಡು ಲಕ್ಷ ಮತ್ತು ಇನ್ನಿತರ ವಹಿವಾಟಿಗೆ 5 ಲಕ್ಷದವರೆಗೂ ಪಾವತಿ ಮಿತಿಯನ್ನು ನಿಗದಿಪಡಿಸಲಾಗಿದೆ. ಆದರೆ ಈ ಪಾವತಿ ಮಿತಿಯನ್ನು ಗ್ರಾಹಕರ ಅಗತ್ಯತೆಗೆ ಅನುಗುಣವಾಗಿ ಪರಿಷ್ಕರಿಸುವ ಅಧಿಕಾರವನ್ನು ಎನ್‌ಪಿಸಿಐಗೆ ನೀಡಲಾಗಿದೆ ಎಂದು ಆರ್.ಬಿ.ಐ ಗವರ್ನರ್ ಸಂಜಯ್ ಮಲ್ಹೋತ್ರ ಹೇಳಿದ್ದಾರೆ.

ವ್ಯಕ್ತಿಯಿಂದ ವ್ಯಕ್ತಿಗೆ ಇರುವ ಪಾವತಿ ಮಿತಿಯು ಒಂದು ಲಕ್ಷದಷ್ಟೇ ಇರುತ್ತದೆ. ಆದರೆ ವಹಿವಾಟಿಕೆ ಹೆಚ್ಚಿನ ಸುರಕ್ಷತಾ ಕ್ರಮ ಕೈಗೊಳ್ಳಲು ಎನ್‌ಪಿಸಿಐಗೆ ಸೂಚನೆ ನೀಡಲಾಗಿದೆ. 

Post a Comment

0 Comments