ಭಾರತದ ಉತ್ಪನ್ನಗಳ ಮೇಲೆ ಶೇ. 26ರಷ್ಟು ಪ್ರತಿಸುಂಕ ವಿಧಿಸಿದ ಟ್ರಂಪ್ ಸರ್ಕಾರ!!!

ಹಲವು ದಿನಗಳಿಂದ ಬಾಯಿ ಮಾತಿನಲ್ಲೇ ಪ್ರತಿ ಸುಂಕ ಸಮರ ಸಾರುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಹಲವು ದೇಶಗಳ ಮೇಲೆ ಪ್ರತಿಸುಂಕ ವಿಧಿಸುವ ಮೂಲಕ ತಮ್ಮ ಮಾತನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳ ಮೇಲೆ 26ರಷ್ಟು ಪ್ರತಿಸುಂಕ ಹೇರಿ ಅಮೇರಿಕಾ ಆದೇಶ ಹೊರಡಿಸಿದೆ.
ಚೀನಾ, ಪಾಕಿಸ್ತಾನ, ಐರೋಪ್ಯ ಒಕ್ಕೂಟಗಳು ಸೇರಿದಂತೆ ಒಟ್ಟು 182 ರಾಷ್ಟ್ರಗಳಿಗೆ ಟ್ರಂಪ್ ಪ್ರತಿಸುಂಕ ಈ ಪ್ರತಿಸುಂಕ ನೀತಿಯು ಏಪ್ರಿಲ್ 9ರಿಂದ ಅನ್ವಯವಾಗಲಿದೆ ಎಂದು ಶ್ವೇತ ಭವನ ಪ್ರಕಟಣೆಯಲ್ಲಿ ತಿಳಿಸಿದೆ.

ಅಮೆರಿಕದಿಂದ ಭಾರತಕ್ಕೆ ಆಮದು ಆಗುತ್ತಿರುವ ವಸ್ತುಗಳಿಗೆ ಭಾರತವು ಶೇಕಡ 52 ರಷ್ಟು ತೆರಿಗೆ ವಿಧಿಸುತ್ತಿದೆ. ಈ ಬಗ್ಗೆ ಮಾತನಾಡಿರುವ ಟ್ರಂಪ್ ಆಡಳಿತ, ನಾವು ಕಳೆದ ಹಲವು ದಶಕಗಳಿಂದ ಭಾರತಕ್ಕೆ ಯಾವುದೇ ತೆರಿಗೆಯನ್ನು ವಿಧಿಸಿಲ್ಲ. ಈ ಸುಂಕ ಹೇರಿಕೆಯು ತೆರಿಗೆ ಹಾಗೂ ತೆರಿಗೆಯೇತರ ನಿರ್ಬಂಧಗಳ ಮೇಲೂ ಅನ್ವಯವಾಗಲಿದೆ ಎಂದು ಹೇಳಿದೆ. ಭಾರತವು ಅಮೆರಿಕದ ವಿರುದ್ಧ ಭಾರಿ ತೆರಿಗೆಯೇತರ ನಿರ್ಬಂಧಗಳನ್ನು ವಿಧಿಸಿದ್ದು ಅದನ್ನು ರದ್ದು ಮಾಡಿದರೆ ಅಮೆರಿಕದ ರಫ್ತು ವಾರ್ಷಿಕವಾಗಿ 5.3 ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಲಿದೆ ಎಂದು ಶ್ವೇತ ಭವನದ ಪ್ರಕಟಣೆ ತಿಳಿಸಿದೆ.

ವ್ಯಾಪಾರ ಕೊರತೆ ಹಾಗೂ ಉತ್ಪನ್ನಗಳಿಗೆ ಪರಸ್ಪರ ವಿಧಿಸುವ ತೆರಿಗೆ ಸಮಾಧಾನಕರವಾಗಿರಲಿದೆ ಎಂದು ಟ್ರಂಪ್ ನಿರ್ಧರಿಸುವವರೆಗೆ ಈ ಸುಂಕಗಳು ಜಾರಿಯಲ್ಲಿರಲಿವೆ ಎಂದು ಪ್ರಕಟಣೆ ಹೇಳಿದೆ. ಭಾರತದೊಂದಿಗೆ ಅಮೆರಿಕ 46 ಬಿಲಿಯನ್ ಡಾಲರ್ ನಷ್ಟು ವ್ಯಾಪಾರ ಕೊರತೆ ಹೊಂದಿದೆ.

ಅಮೇರಿಕಾವು 182 ದೇಶಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ಪ್ರತಿಸುಂಕ ವಿಧಿಸಿದ್ದು ಚೀನಾ ಮೇಲೆ 34%, ಐರೋಪ್ಯ ಒಕ್ಕೂಟ 20%, ಜಪಾನ್ 24%,ಪಾಕಿಸ್ತಾನ 29%, ಭಾರತ 26%, ಥೈಲ್ಯಾಂಡ್ 36%, ಬಾಂಗ್ಲಾದೇಶ 37%, ಶ್ರೀಲಂಕಾ 44%, ಕಾಂಬೋಡಿಯ 49%, ವಿಯೆಟ್ನಾಂ ಮೇಲೆ 46% ಪ್ರತಿ ಸುಂಕ ವಿಧಿಸಿದೆ.

Post a Comment

0 Comments