ಪ್ರಸ್ತುತ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಸಾರ್ವಜನಿಕರು ಗುಟ್ಕಾ ಪಾನ್ ಮಸಾಲ ದಂತಹ ತಂಬಾಕು ಆಧಾರಿತ ಪದಾರ್ಥಗಳನ್ನು ಆಗಿದ್ದು ಉಗುಳುವ ಬಗ್ಗೆ ಸಾರ್ವಜನಿಕರ ದೂರು ಹೆಚ್ಚಾಗುತ್ತಿದೆ. ಏನ್ ಸಮಸ್ಯೆಯನ್ನು ಪರಿಹರಿಸಲು ನಮ್ಮ ಮೆಟ್ರೋ ಆವರಣದಲ್ಲಿ ಉಗುಳುವುದು ಅಥವಾ ಕಸ ಹಾಕುವುದನ್ನು ತಪ್ಪಿಸಲು ಜನದಟ್ಟಣೆ ಇಲ್ಲದ ಸಮಯಗಳಲ್ಲಿ ಗಸ್ತು ತಿರುಗುವುದನ್ನು ಬಲಪಡಿಸಲಾಗುವುದು. ಹಾಗೆಯೇ ಮೆಟ್ರೋ ರೈಲು ಮತ್ತು ನಿಲ್ದಾಣಗಳಲ್ಲಿ ಕಂಗಾವಳು ಹೆಚ್ಚಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥ ಪ್ರಯಾಣಿಕರಿಗೆ ಬಿಎಮ್ಆರ್‌ಸಿಎಲ್ ನಿಯಮ ಗರ ಪ್ರಕಾರ ದಂಡ ವಿಧಿಸಲಾಗುತ್ತದೆ ಎಂದು ಸೂಚನೆ ನೀಡಿದೆ.
ಗುಟ್ಕಾ ಪಾನ್ ಮಸಾಲದಂತಹ ವಸ್ತುಗಳನ್ನು ಲೋಹಶೋಧಕಗಳ ಮೂಲಕ ಪತ್ತೆ ಹಚ್ಚಲು ಅಸಾಧ್ಯ. ಆದ್ದರಿಂದ ಅನುಮಾನ ಬಂದ ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ಆಗಾಗ ಈ ಬಗ್ಗೆ ತಪಾಸಣೆ ಮಾಡಲಾಗುವುದು. ಹಾಗೆಯೇ ತಂಬಾಕು ಪದಾರ್ಥಗಳನ್ನು ಜಗಿಯುವ ಪ್ರಯಾಣಿಕರನ್ನು ಸೂಕ್ಷ್ಮ ರೀತಿಯಲ್ಲಿ ಗಮನಿಸಲು ಮತ್ತು ಜನರೊಂದಿಗೆ ಕುರಿತು ಸಂವೇದನಾಶೀಲವಾಗಿ ನಡೆದುಕೊಳ್ಳಲು ಪ್ಲಾಟ್ ಫಾರ್ಮ್ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ. ಹಾಗೆಯೇ ತಂಬಾಕು ಸೇವನೆ ಕುರಿತು ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ಅಧ್ಯಯನವನ್ನು ನಡೆಸಲಾಗುವುದು ಎಂದು ಬಿಎಂಆರ್‌ಪಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
0 Comments