ರೈಲು ಸಂಚರಿಸುವ ವೇಳೆಯಲ್ಲಿ ಎಟಿಎಂ ಸೇವೆಗಳು ಲಭ್ಯವಿದ್ದು ಈ ಯೋಜನೆಗೆ ಭೂಸ್ವಾಲ್ ರೈಲ್ವೆ ವಿಭಾಗ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ ಕೈ ಜೋಡಿಸಿದೆ. ಪಂಚವಟಿ ಎಕ್ಸ್ಪ್ರೆಸ್ ನ ಎಸಿ ಬೋಗಿಯೊಳಗೆ ಎಟಿಎಂ ಅನ್ನು ಸ್ಥಾಪಿಸಲಾಗಿದೆ. ಈ ರೈಲಿನ ಎಲ್ಲಾ ಬೋಗಿಗಳು ಒಂದಕ್ಕೊಂದು ಸಂಪರ್ಕ ಹೊಂದಿರುವುದರಿಂದ ಯಾವುದೇ ಕೋಚಿನ ಪ್ರಯಾಣಿಕರಾದರೂ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಎಟಿಎಂ ಯಂತ್ರಕ್ಕೆ ಶಟರ್ ವ್ಯವಸ್ಥೆಯ ಭದ್ರತೆಯನ್ನು ಒದಗಿಸಲಾಗಿದ್ದು, ಜೊತೆಗೆ ದಿನದ 24 ಗಂಟೆಯೂ ಸಿಸಿಟಿವಿ ಕಂಗಾವಲು ಇರಲಿದೆ.
ರೈಲಿನೊಳಗೆ ಎಟಿಎಂ ಯಂತ್ರ ಸ್ಥಾಪಿಸಿ ಅನುಷ್ಠಾನಗೊಳಿಸಿದ ಈ ಯೋಜನೆ ಯಶಸ್ವಿಯದಲ್ಲಿ ಇನ್ನಷ್ಟು ರೈಲುಗಳಲ್ಲಿ ಎಟಿಎಂ ಯಂತ್ರಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿದೆ. ಇದರಿಂದ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತುರ್ತು ಹಣದ ಅವಶ್ಯಕತೆ ಇದ್ದಲ್ಲೇ ರೈಲಿನೊಳಗಡೆಯೇ ಹಣ ಪಡೆಯುವ ಉತ್ತಮ ಸೌಲಭ್ಯ ಇದಾಗಿದೆ.
0 Comments