ಪ್ರಸ್ತುತ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮೇ 13 ರಂದು ವಯೋನಿವೃತ್ತಿ ಹೊಂದಲಿದ್ದಾರೆ. ಈ ದೆಸೆಯಿಂದ ತಮ್ಮ ಉತ್ತರಾಧಿಕಾರಿಯನ್ನಾಗಿ ಡಿಆರ್ ಗವಾಯಿ ಅವರನ್ನು ಶಿಫಾರಸ್ಸು ಮಾಡಿದ್ದು, ಅವರು ಮೇ 14ರಂದು ಸುಪ್ರೀಂ ಕೋರ್ಟ್ ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನ್ಯಾಯಮೂರ್ತಿ ಗವಾಯಿ ಅವರು ಮುಂದಿನ ನವಂಬರ್ ತಿಂಗಳಲ್ಲಿ ನಿವೃತ್ತರಾಗಲಿದ್ದು, ಸಿಜೆಐ ಹುದ್ದೆಯಲ್ಲಿ ಅವರಿಗೆ ಆರು ತಿಂಗಳ ಸೇವಾವಧಿಯಷ್ಟೇ ಸಿಗಲಿದೆ.
0 Comments