ಶೀಘ್ರದಲ್ಲೇ ಖಾಸಗಿ ಬಸ್ ದರ ಏರಿಕೆ ಸಾಧ್ಯತೆ..!!!?

ದಿನೇ ದಿನೇ ಬೆಲೆ ಏರಿಕೆಯ ಬಿಸಿ ಸಾಮಾನ್ಯರ ಮೇಲೆ ಬೀಳುತ್ತಿದ್ದು ಇದೀಗ ಜನತೆಗೆ ಮತ್ತೊಂದು ಬಿಗ್ ಶಾಕ್ ಕಾದಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಮೆಟ್ರೋ ಪ್ರಯಾಣ ದರ ಹೆಚ್ಚಳದ ಬೆನ್ನಲ್ಲೇ ಖಾಸಗಿ ಬಸ್ ದರ ಹೆಚ್ಚಿಸುವ ಬಗ್ಗೆ ಖಾಸಗಿ ಬಸ್ ಮಾಲೀಕರು ಸೂಚನೆ ನೀಡಿದ್ದಾರೆ. 
ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಟಿಕೆಟ್ ದರ ಹೆಚ್ಚಾಗಿರುವುದು ಪ್ರಯಾಣಿಕರಿಗೆ ಈಗಾಗಲೇ ಹೊರೆಯಾಗಿ ಪರಿಣಮಿಸಿದೆ.‌ ಇದರ ಜೊತೆಯಲ್ಲೇ ಖಾಸಗಿ ಬಸ್ ಮಾಲೀಕರು ಕೂಡ ಟಿಕೆಟ್ ದರ ಏರಿಕೆ ಮಾಡುತ್ತೇವೆ ಎಂದಿರೋದು ಪ್ರಯಾಣಿಕರಿಗೆ ಮತ್ತಷ್ಟು ಕಸಿವಿಸಿ ಶುರುವಾಗಿದೆ.

ಸರ್ಕಾರ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದ ಕ್ರಮವನ್ನು ಹಿಂಪಡೆಯದಿದ್ದರೆ ಬಸ್ ಟಿಕೆಟ್ ದರ ಹೆಚ್ಚಳ ಮಾಡುತ್ತೇವೆ ಎಂದು ಖಾಸಗಿ ಬಸ್ ಮಾಲೀಕರು ಈಗಾಗಲೇ ತಿಳಿಸಿದ್ದಾರೆ. ಖಾಸಗಿ ಬಸ್ ದರ 15 ರಿಂದ 20 ಶೇಕಡಾ ಏರಿಕೆಯಾಗುವ ಸಾಧ್ಯತೆಯಿದೆ.

Post a Comment

0 Comments