ಇತ್ತೀಚೆಗೆ ರಾಜ್ಯ ಸರ್ಕಾರವು ಒಂದನೇ ತರಗತಿ ಪ್ರವೇಶಕ್ಕೆ ಕಡ್ಡಾಯವಾಗಿ ಆರು ವರ್ಷ ಪೂರ್ಣವಾಗಿರಬೇಕು ಎಂಬ ನಿಯಮವನ್ನು ರಾಜ್ಯ ಶಿಕ್ಷಣ ಇಲಾಖೆ ಜಾರಿಗೊಳಿಸಿತ್ತು. ಇದರಿಂದಾಗಿ ಲಕ್ಷಾಂತರ ಮಕ್ಕಳಿಗೆ ಒಂದನೇ ತರಗತಿ ಪ್ರವೇಶ ಅಡ್ಡಿಯಾಗಿತ್ತು. ಇದೀಗ ಈ ನಿಯಮವನ್ನು ಸಡಿಲ ಗೊಳಿಸುತ್ತಿರುವ ಶಿಕ್ಷಣ ಇಲಾಖೆ 5 ವರ್ಷ 6 ತಿಂಗಳು ತುಂಬಿದ ನಂತರ ಮಕ್ಕಳನ್ನು ಒಂದನೇ ತರಗತಿಗೆ ಪ್ರವೇಶ ಮಾಡಬಹುದು ಎಂಬ ನಿಯಮವನ್ನು ಜಾರಿಗೊಳಿಸುತ್ತಿದೆ.
ಎಸ್ಇಪಿ ವರದಿ ಆಧಾರದ ಮೇಲೆ ಮಕ್ಕಳ 1ನೇ ತರಗತಿ ಪ್ರವೇಶಕ್ಕೆ 6 ವರ್ಷ ಪೂರ್ಣ ಕಡ್ಡಾಯ ಎಂಬ ನಿಯಮವನ್ನು ಸಡಿಲಿಕೆ ಮಾಡಲಾಗಿದೆ. ಪೋಷಕರು ಆರು ವರ್ಷ ಕಡ್ಡಾಯ ಎಂಬ ನಿಯಮವನ್ನು ಸಡಿಲಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಒತ್ತಡಕ್ಕೆ ಮಣಿದಿರುವ ಶಿಕ್ಷಣ ಇಲಾಖೆಯ ವಯೋಮಿತಿ ಸಡಿಲಿಕೆ ನಿಯಮವನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸುತ್ತಿದೆ. ಇದರಿಂದಾಗಿ ಮಕ್ಕಳ ವಯೋಮಿತಿ ಬಗ್ಗೆ ಚಿಂತಿತರಾಗಿದ್ದ ಪೋಷಕರಿಗೆ ಇದು ಬಹು ಸಂತಸದ ಸುದ್ಧಿಯಾಗಿದೆ.
0 Comments