ಗಡಿ ಸುರಕ್ಷತೆಗಾಗಿ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆ!!

ದೇಶದ ಗಡಿಪ್ರದೇಶಗಳನ್ನು ರಕ್ಷಿಸಲು ಕೇಂದ್ರ ಸರಕಾರವು ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆಯನ್ನು ಜಾರಿಗೊಳಿಸಲಿದೆ ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಹೇಳಿದ್ದಾರೆ.‌ ನೆರೆಯ ಶತ್ರು ರಾಷ್ಟ್ರವಾದ ಪಾಕಿಸ್ತಾನದ ನುಸುಳುಕೋರ ಉಗ್ರರ ಹಾವಳಿಯನ್ನು ತಡೆಗಟ್ಟಲು, ಅವರು ಬಳಸುವಂತಹ ಭೂಗತ ಸುರಂಗ ಮಾರ್ಗಗಳನ್ನು ಪತ್ತೆ ಹಚ್ಚಿ ಅವುಗಳನ್ನು ಧ್ವಂಸಗೊಳಿಸಲು ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುವುದು ಎಂದು ಶಾ ಹೇಳಿದ್ದಾರೆ. 
ಗಡಿರಕ್ಷಣೆಯಲ್ಲಿ ಬಿಎಸ್ಎಫ್ ಯೋಧರ ತ್ಯಾಗ ಬಲಿದಾನಗಳು ಸ್ಮರಣೀಯ ಎಂದು ಶಾ ಕೊಂಡಾಡಿದ್ದಾರೆ. ಪಕ್ಕದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶಗಳ ಸಂರಕ್ಷಣೆಗೆ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿದೆ. ಈ ವ್ಯವಸ್ಥೆಯಿಂದ ಯೋಧರು ಶತ್ರು ಸೈನ್ಯದ ಚಟುವಟಿಕೆಗಳನ್ನು ಸಕಾಲದಲ್ಲಿ ಗುರುತಿಸಿ ತಕ್ಷಣವೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿದೆ. 

Post a Comment

0 Comments