ಒಟ್ಟು 1,161 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು 10ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. 18ರಿಂದ 23 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ. ಅಂದರೆ 2002 ಆಗಸ್ಟ್ 2ರ ಬಳಿಕ 2007ರ
ಆಗಸ್ಟ್ 1ರ ಒಳಗೆ ಜನಿಸಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶ. ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಇತರೆ ಹಿಂದುಳಿದ ವರ್ಗ ಮಾಜಿ ಸೈನಿಕರಿಗೆ ಮೂರು ವರ್ಷ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕವು ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗ, ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ 100 ರೂಪಾಯಿ ನಿಗದಿಪಡಿಸಲಾಗಿದ್ದು, ಉಳಿದಂತೆ ಎಸ್ಸಿ ,ಎಸ್ಟಿ, ವಿಶೇಷ ಚೇತನ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಮೊದಲಿಗೆ ಹೈಟ್ ಬಾರ್ ಟೆಸ್ಟ್ (ಎಚ್.ಬಿ.ಟಿ) ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತದೆ. ನಂತರ ಇವೆರಡರಲ್ಲಿ ಅರ್ಹತೆ ಪಡೆದವರು ಲಿಖಿತ ಪರೀಕ್ಷೆ ಬರೆಯಬೇಕಾಗುತ್ತದೆ. ಲಿಖಿತ ಪರೀಕ್ಷೆ ಓ ಎಂ ಆರ್ ಮಾದರಿ ಅಥವಾ ಸಿ ಬಿ ಟಿ ಮೂಲಕ ನಡೆಯಲಿದೆಯೇ ಎನ್ನುವುದನ್ನು ಇನ್ನೂ ಸಿಐಎಸ್ಎಫ್ ಸ್ಪಷ್ಟಪಡಿಸಿಲ್ಲ. ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಜನರಲ್ ಅವೇರ್ನೆಸ್ ಅಥವಾ ಜನರಲ್ ನಾಲೆಜ್, ನಾಲೆಜ್ ಆಫ್ ಎಲಿಮೆಂಟರಿ ಮ್ಯಾಥೆಮ್ಯಾಟಿಕ್ಸ್, ಅನಾಲಿಟಿಕಲ್ ಆಪ್ಟಿಟ್ಯೂಡ್ ಸಂಬಂಧಿಸಿದ ನೂರು ಅಂಕಗಳ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆ ಬರೆಯಲು 2:00 ಕಾಲಾವಕಾಶವಿದೆ. ಇದರಲ್ಲಿ ಅರ್ಹತೆ ಪಡೆದವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ಆಯಾ ವಲಯಗಳು ನೇಮಕ ಪ್ರಕ್ರಿಯೆ ನಡೆಸಲಿವೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ನೇಮಕ ಪ್ರಕ್ರಿಯೆ ಚೆನ್ನೈ ಸಿಐಎಸ್ಎಫ್ ವ್ಯಾಪ್ತಿಗೆ ಒಳಪಡುತ್ತವೆ.
ಅರ್ಜಿ ಸಲ್ಲಿಸಲು ಆರಂಭ ಮಾರ್ಚ್ 5 2025, ಅರ್ಜಿ ಸಲ್ಲಿಸಲು ಕೊನೆಯ ದಿನ ಏಪ್ರಿಲ್ 3, 2025 ಆಗಿರುತ್ತದೆ. ವೇತನ ಶ್ರೇಣಿಯು 21,700 ರಿಂದ 69,100 ಎಂದು ನಿಗದಿಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ www.cisf.gov.in ಗೆ ಭೇಟಿ ನೀಡಬಹುದು.
0 Comments