ಐಟಿ ಉದ್ಯೋಗ ಬಿಟ್ಟು ಬಂದು ಚಾಕೊಲೇಟ್ ಉದ್ಯಮದಲ್ಲಿ ಯಶಸ್ವಿಯಾದ ದಂಪತಿಗಳು

 ಕೋವಿಡ್ ಸಮಯದಲ್ಲಿ ಹಲವು ಉದ್ಯಮಗಳು ಮನೆಯಲ್ಲೇ ಆರಂಭವಾಗಿ ಇಂದು ಯಶಸ್ವಿಯಾಗಿ ಮುನ್ನಡೆಯುತ್ತಿದೆ ಅದರಲ್ಲಿ ಅನುತ್ತಮ ಚಾಕೊಲೇಟ್ ಕೂಡ ಒಂದು..ಬಾಲಸುಬ್ರಹ್ಮಣ್ಯ ಹಾಗೂ ಸ್ವಾತಿ ದಂಪತಿಗಳು ಐಟಿ ಉದ್ಯಮವನ್ನು ಬಿಟ್ಟು ಬಂದು ಊರಿನ ತಮ್ಮ ಮನೆಯಲ್ಲೇ ಅನುತ್ತಮ ಚಾಕೊಲೇಟ್ ತಯಾರಿಸುತ್ತ ಜೊತೆಗೆ ಉದ್ಯೋಗ ನೀಡಿ ಯಶಸ್ವಿಯಾಗಿ ಉದ್ಯಮ ನಡೆಸುತ್ತಿದ್ದಾರೆ..ಅವರ ಈ ಪ್ರಯತ್ನ ಮೆಚ್ಚೆಲೇಬೇಕು.


ಪುತ್ತೂರಿನ ಆರ್ಲಪದವಿನಲ್ಲಿ ತಯಾರಾಗುವ ಅನುತ್ತಮ ಚಾಕೊಲೇಟ್ ಇವತ್ತು ದೇಶ ವಿದೇಶಗಳಿಗೆ ತಲುಪುತ್ತಿದೆ ಎಂಬುದು ಹೆಮ್ಮೆಯ ವಿಚಾರ..ಮೂಲತಃ ಕೃಷಿಕರಾಗಿದ್ದು, ಐಟಿ ಉದ್ಯೋಗಿ ಆಗಿದ್ದರು ಕೋವಿಡ್ ಸಮಯದಲ್ಲಿ ಮನೆಗೆ ಬಂದಾಗ ತಮ್ಮ ತೋಟದಲ್ಲಿ ಬೆಳೆದ ಕೋಕೋವನ್ನು ಬಳಸಿ ಸಕ್ಕರೆ ಬದಲು ಬೆಲ್ಲವನ್ನು ಬಳಸಿ ಯಾವುದೇ ಬಣ್ಣ ಹಾಕದೆ ನೈಸರ್ಗಿಕವಾಗಿ ಚಾಕೊಲೇಟ್ ತಯಾರಿಸಲು ಆರಂಭಿಸಿದರು..
ಎಲ್ಲರಿಗೂ ಇಷ್ಟವಾಗಿ ನಿಧಾನವಾಗಿ ಚಾಕೊಲೇಟ್ ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸುತ್ತ ತಾವು ಐಟಿ ಉದ್ಯೋಗವನ್ನು ಬಿಟ್ಟು ಊರಿನಲ್ಲಿ ನೆಲೆಸಿ ಊರಿನ ಅನೇಕರಿಗೆ ಉದ್ಯೋಗ ನೀಡಿ ಮನೆಯ ಮೇಲೇ ಚಾಕೊಲೇಟ್ ತಯಾರಿ ಘಟಕ ನಿರ್ಮಿಸಿ ಇಂದು ಹಲವು ರಾಜ್ಯಗಳಿಗೆ ರಫ್ತು ಮಾಡುತ್ತಿದ್ದು, ಜನರಿಂದ ಉತ್ತಮ ಬೇಡಿಕೆಯಿದೆ...ಊರಿನ ಕೃಷಿಕರಿಗೂ ಸಹಾಯವಾಗಲೂ ಅವರಿಂದ ಕೋಕೋವನ್ನು ಖರೀದಿಸುತ್ತಿದ್ದಾರೆ...ನಿಜಕ್ಕೂ ಸ್ವಾವಲಂಬಿಯಾಗಿ ಬೆಳೆಯುವ ಈ ರೀತಿಯ ವಿಭಿನ್ನವಾದ ಸಾಹಸದ ಪ್ರಯತ್ನ ಶ್ಲಾಘನೀಯ...ಇಂದು ಅನುತ್ತಮ ಚಾಕೊಲೇಟ್ ಹೆಸರುವಾಸಿಯಾಗಿದೆ..

Post a Comment

0 Comments