ಅಮೆರಿಕಾದ ಸೀನ್ ಬೇಕರ್ ನಿರ್ದೇಶನದ "ಅನೋರಾ" ಚಿತ್ರವನ್ನು 60 ಲಕ್ಷ ಡಾಲರ್ ಅಂದರೆ 52.38 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅತ್ಯುತ್ತಮ ನಟ, ಅತ್ಯುತ್ತಮ ಮೂಲ ಚಿತ್ರಕಥೆ, ಅತ್ಯುತ್ತಮ ಚಿತ್ರ ಸಂಕಲನ ವಿಭಾಗಗಳಲ್ಲಿ 97ನೇ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
"ದಿ ಬ್ರೂಟಲಿಸ್ಟ್" ಚಿತ್ರದ ನಟ ಅಡ್ರಿಯನ್ ಬ್ರಾಡಿ ಅತ್ತೆ ತಮ್ಮ ನಟ ಹಾಗೂ ಅನೋರ ಚಿತ್ರದ ನಾಯಕಿ ಮೈಕಿ ಮ್ಯಾಡಿಸನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಅನೋರ ಚಿತ್ರದ ನಿರ್ದೇಶಕ ಸೀನ್ ಬೇಕರ್ ಅವರು ವೈಯಕ್ತಿಕವಾಗಿ ನಾಲ್ಕು ಆಸ್ಕರ್ ಗಳನ್ನು ಪಡೆಯುವ ಯಶಸ್ವಿಯಾದರು. ಈ ಮೂಲಕ ಅವರು 1954 ರಲ್ಲಿ 4 ವಿಭಿನ್ನ ಚಿತ್ರಗಳಿಗೆ ಪ್ರಶಸ್ತಿ ಪಡೆದಿದ್ದ ವಾಲ್ಟ್ ಡಿಸ್ನಿ ಅವರ ದಾಖಲೆಯನ್ನು ಸರಿಗಟ್ಟಿದರು.
"ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಫಿಲಂ" ವಿಭಾಗದಲ್ಲಿ ಸ್ಪರ್ಧಾ ಕಣದಲ್ಲಿದ್ದ ಭಾರತೀಯ ಕಿರುಚಿತ್ರ "ಅನುಜ" ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಆಡಂ ಜೆ ಗ್ರೇವ್ಸ್ ಮತ್ತು ಸುಚಿತ್ರ ಮಟ್ಟೈ ನಿರ್ದೇಶಿಸಿರುವ ಈ ಚಿತ್ರವು ಬಾಲಕಾರ್ಮಿಕ ಪದ್ಧತಿ ಸಮಸ್ಯೆ ಬಗ್ಗೆ ಗಮನ ಸೆಳೆಯುತ್ತದೆ. ಎರಡು ಬಾರಿ ಆಸ್ಕರ್ ವಿಜೇತ ನಿರ್ಮಾಪಕ ಗುನೀತ್ ಮೊಂಗಾ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದು, ಹಾಲಿವುಡ್ ನ ಪ್ರಸಿದ್ಧ ಲೇಖಕ ಮಿಂಡಿ ಕಾಲಿಂಗ್ ನಿರ್ಮಾಪಕರಾಗಿದ್ದಾರೆ.

0 Comments