ಈ ಅತ್ಯಾಧುನಿಕ ಡ್ರೋನ್ ಸುರಕ್ಷತಾ ವ್ಯವಸ್ಥೆಗೆ "ಇಂದ್ರಜಾಲ" ಎಂದು ಹೆಸರಿಡಲಾಗಿದೆ. ಇದನ್ನು ಜಗತ್ತಿನ ಪ್ರಪ್ರಥಮ ವಿಶಾಲ ಪ್ರದೇಶ ಕೌಂಟರ್- ಅನ್ಮ್ಯಾನ್ಡ್ ಏರ್ ಕ್ರಾಫ್ಟ್ ಸಿಸ್ಟಮ್ (ಸಿ-ಎಯುಎಸ್) ಎಂದು ಬಣ್ಣಿಸಲಾಗಿದೆ.
ಭಾರತದ ಭವಿಷ್ಯದಲ್ಲಿನ ರಕ್ಷಣಾ ವಲಯ, ಸಾರ್ವಜನಿಕ ಮೂಲಸೌಕರ್ಯ ಮತ್ತು ಖಾಸಗಿ ಕ್ಷೇತ್ರಗಳ ಭದ್ರತಾ ಸವಾಲುಗಳಿಗೆ ಈ ಇಂದ್ರಜಾಲ ಪರಿಹಾರ ಆಗಬಲ್ಲದು ಎಂದು ಡೆಪ್ಯುಟಿ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿದ್ದ, ಉತ್ತರ ಪ್ರದೇಶದ ರಾಜ್ಯಪಾಲ ಲೆ.ಜ. ಗುರ್ಮಿತ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಇಂದ್ರಜಾಲ ವಿಶಿಷ್ಟವಾದ ವಿನ್ಯಾಸ ಹೊಂದಿದ್ದು ಕೃತಕ ಬುದ್ಧಿಮತ್ತೆ ಚಾಲಿತ 12 ವಿಭಿನ್ನ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಈ ವ್ಯವಸ್ಥೆಯು 360 ಡಿಗ್ರಿ ರಕ್ಷಣೆಯನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ ಬೆದರಿಕೆಗಳನ್ನು ರಿಯಲ್ ಟೈಮ್ ನಲ್ಲಿ ಪತ್ತೆ ಮಾಡಿ ವರ್ಗೀಕರಿಸಿ ಅದರ ಜಾಡು ಹಿಡಿದು ನಿಷ್ಕ್ರಿಯಗೊಳಿಸಬಲ್ಲುದಾಗಿದೆ. ಇದನ್ನು ಇಂದ್ರಜಾಲ 30 ಸೆಕೆಂಡುಗಳಿಂದ ಕೆಲವೇ ನಿಮಿಷಗಳಲ್ಲಿ ಮಾಡಿ ಮುಗಿಸಬಲ್ಲದು. ಎಲ್ಲಾ ತರಹದ ಸ್ವಯಂ ಚಾಲಿತ ಡ್ರೋನ್ ಗಳು ವಿರುದ್ಧ ರಕ್ಷಣೆ ಒದಗಿಸುವ ಇಂದ್ರಜಾಲ 4000 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾರ್ಯ ಎಸಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಂಸ್ಥೆಯ ಸ್ಥಾಪಕ ಕಿರಣ್ ರಾಜು ತಿಳಿಸಿದ್ದಾರೆ. ಜಮ್ಮು ವಿಮಾನ ನಿಲ್ದಾಣದಲ್ಲಿ 2021ರ ಜೂನ್ 27 ಮತ್ತು ಗಲ್ವಾನ್‌ನಲ್ಲಿ ಜೂನ್ 15ರಂದು ನಡೆದ ದ್ರೋಣ್ ದಾಳಿ ನಾವು ಮರೆಯಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳನ್ನು ಎದುರಿಸಲು ಇಂದ್ರಜಾಲ ಸೂಕ್ತ ವ್ಯವಸ್ಥೆ ಆಗಿದೆ. ಭವಿಷ್ಯದಲ್ಲಿ ಡ್ರೋನ್ ಚಟುವಟಿಕೆಗಳು ತೀರಾ ಹೆಚ್ಚಾಗಲಿದ್ದು ಆ ಪೈಕಿ ಶೇಕಡ 95 ಸ್ನೇಹಿ ಡ್ರೋನ್ಗಳಾಗಿರಲಿದ್ದು ಕೇವಲ ಐದರಷ್ಟು ಮಾತ್ರ ಆತಂಕಕಾರಿ ಡ್ರೋನ್ಗಳಿರುತ್ತವೆ. ಇಂದ್ರಜಾಲ ಇವೆರಡರ ವ್ಯತ್ಯಾಸ ಗುರುತಿಸಿ ಕಾರ್ಯ ನಿರ್ವಹಿಸಬಲ್ಲದು ಎಂದು ಅವರು ತಿಳಿಸಿದ್ದಾರೆ.
ಇಂದ್ರಜಾಲ ಡ್ರೋನ್ ವ್ಯವಸ್ಥೆಯಲ್ಲಿನ ಅಪಾಯಕಾರಿ ಸನ್ನಿವೇಶಗಳಲ್ಲಿ ರಕ್ಷಾ ಕವಚವಾಗಿ ಭಾರತದ ಶಾಂತಿ ವ್ಯವಸ್ಥೆಯನ್ನು ಕಾಪಾಡ ಬಲ್ಲ ಶಕ್ತಿಯಾಗಿದೆ. ಇಂತಹ ಮತ್ತಷ್ಟು ಸ್ವದೇಶಿ ಆವಿಷ್ಕಾರಗಳು ಭಾರತದ ರಕ್ಷಣಾ ವಲಯಕ್ಕೆ ಬಹುದೊಡ್ಡ ಆಧಾರವೇ ಸರಿ.
0 Comments