ಶೇ.47.8 ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ..!!

ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸರ್ವೆ ಪ್ರಕಾರ ಕರ್ನಾಟಕದಲ್ಲಿ 18ರಿಂದ 49 ವರ್ಷ ವಯಸ್ಸಿನ ಶೇಕಡ 47.8 ಹೆಣ್ಣು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಾ ಇದ್ದಾರೆ ಎಂದು ಸರಕಾರ ತಿಳಿಸಿದೆ. 
ಮಂಗಳವಾರ ವಿಧಾನಪರಿಷತ್ತಿನಲ್ಲಿ ಡಾಕ್ಟರ್ ತಳವಾರ್ ಸಾಬಣ್ಣ, ಕಲ್ಯಾಣ ಕರ್ನಾಟಕದಲ್ಲಿ ಅಪೌಷ್ಟಿಕತೆ ಕಾರಣದಿಂದ ಹೆಣ್ಣು ಮಕ್ಕಳ ಬೆಳವಣಿಗೆ ಕುಂಠಿತವಾಗಿ ತಾಯಂದಿರು ಮರಣ ಹೊಂದುತ್ತಿದ್ದಾರೆ. ಆದ್ದರಿಂದ ವರ್ಷಕ್ಕೊಮ್ಮೆ ತಾಯಿ-ಮಗು ಆರೋಗ್ಯ ತಪಾಸಣೆ, ಆರೋಗ್ಯ ಇಲಾಖೆಗೆ ಅನುದಾನವನ್ನು ಹೆಚ್ಚಿಸಬೇಕು, ಅಪೌಷ್ಟಿಕತೆ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಪಠ್ಯದಲ್ಲಿ ಅಳವಡಿಸುವಂತೆ ಸರಕಾರದ ಗಮನ ಸೆಳೆದರು. 

ಇದಕ್ಕೆ ಉತ್ತರಿಸಿದ ಸಭಾ ನಾಯಕ ಬೋಸರಾಜು ರಾಜ್ಯದಲ್ಲಿ ಶೇಕಡ 47.8 ಹೆಣ್ಣು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಕಳೆದ ಸರ್ವೆಗೆ ಹೋಲಿಸಿದರೆ ಈ ಬಾರಿ ಶೇಕಡ 3.8 ಪ್ರಮಾಣ ಇಳಿಕೆಯಾಗಿದೆ. ರಾಜ್ಯದಲ್ಲಿ 69,921 ಅಂಗನವಾಡಿ ಇದ್ದು ಆರು ತಿಂಗಳಿಂದ ಆರು ವರ್ಷದವರೆಗೆ 38,97,482 ಮಕ್ಕಳು ಇದ್ದಾರೆ. 8,10,845 ಗರ್ಭಿಣಿಯರು ಮತ್ತು ಬಾಣಂತಿಯರು ಇದ್ದಾರೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 82,980 ಪ್ರಾಯ ಪೂರ್ವ ಬಾಲಕಿಯರನ್ನು ಪೂರಕ ಪೌಷ್ಟಿಕ ಆಹಾರ ಸೇವನೆಗಾಗಿ ಗುರುತಿಸಲಾಗಿದೆ ಎಂದು ಹೇಳಿದರು.

ರಕ್ತ ಹೀನತೆ ಎಂಬುದು ಹೆಣ್ಣು ಮಕ್ಕಳನ್ನು ಕಾಡುವ ಬಹುದೊಡ್ಡ ಸಮಸ್ಯೆ. ಹೆಚ್ಚಿನ ದಿನಗಳಲ್ಲಿ ಆಹಾರ ಪದ್ಧತಿಯು ಸಂಪೂರ್ಣ ಬದಲಾಗಿದ್ದು ದೇಹದಲ್ಲಿನ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ತುಂಬಾ ಕಡಿಮೆ ಕಂಡು ಬರುತ್ತದೆ. ಇದರಿಂದಾಗಿ ಹೆಣ್ಣು ಮಕ್ಕಳು ನನ್ನ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ. ಆದ್ದರಿಂದ ಪ್ರತಿ ಅಂಗನವಾಡಿ, ಶಾಲಾ ಕಾಲೇಜುಗಳಲ್ಲಿ, ಸರಕಾರಿ ಆಸ್ಪತ್ರೆಗಳಲ್ಲಿ ಮಹಿಳೆಯರ ಆರೋಗ್ಯ ತಪಾಸಣೆ ನಡೆಸಿ ರಕ್ತಹೀನತೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

Post a Comment

0 Comments