CUET-UG ಗೆ ಅರ್ಜಿ ಸಲ್ಲಿಕೆ ಆರಂಭ

ದ್ವಿತೀಯ ಪಿಯುಸಿ ಉತ್ತೀರ್ಣರಾದ ನಂತರ ವಿವಿಧ ಕೋರ್ಸ್ ಗಳಿಗೆ ಪ್ರವೇಶಕ್ಕಾಗಿ ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ (CUET-UG) ಮೇ 8 ರಿಂದ ಜೂನ್ ವರೆಗೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಕಟಣೆಯಲ್ಲಿ ತಿಳಿಸಿದೆ.
ಪರೀಕ್ಷೆಗೆ ಮಾರ್ಚ್ 1 ರಿಂದ ಅರ್ಜಿ ಸಲ್ಲಿಕೆ    ಆರಂಭವಾಗಿದ್ದು, ಮಾರ್ಚ್ 22 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಪರೀಕ್ಷಾ ದಿನಾಂಕಗಳು ತಾತ್ಕಾಲಿಕವಾಗಿದ್ದು ವಿವರವಾದ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷೆಯು ಇಂಗ್ಲೀಷ್, ಹಿಂದಿ, ಕನ್ನಡ, ಅಸ್ಸಾಮಿ, ಬಂಗಾಳಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ನಡೆಯಲಿದೆ.

ಏನಿದು ಸಿ.ಯು.ಇ.ಟಿ?
ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ(the common University entrance test) ಯನ್ನು ಈ ಹಿಂದೆ ಕೇಂದ್ರೀಯ ವಿಶ್ವವಿದ್ಯಾಲಯದ ಸಾಮಾನ್ಯ ಪ್ರವೇಶ ಪರೀಕ್ಷೆ ಎಂದು ಕರೆಯಲಾಗುತ್ತಿತ್ತು. ಇದೀಗ ಇದು ದೇಶದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಮತ್ತು ಇತರ ಭಾಗವಹಿಸುವ ಸಂಸ್ಥೆಗಳಲ್ಲಿ ಪದವಿಪೂರ್ವ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕೋರ್ಸ್ಗಳ ಪ್ರವೇಶಕ್ಕಾಗಿ ವಿವಿಧ ಹಂತಗಳಲ್ಲಿ ನಡೆಸುವ ಪ್ರಮಾಣಿಕೃತ ಪರೀಕ್ಷೆಯಾಗಿದೆ.

ಕೇಂದ್ರ ರಾಜ್ಯ ಮತ್ತು ಆಯುಧ ಖಾಸಗಿ ವಿಶ್ವವಿದ್ಯಾಲಯಗಳಿಗೆ ಪ್ರವೇಶಕ್ಕಾಗಿ 2012ರಲ್ಲಿ ಸಿಯುಇಟಿ-ಯುಜಿ ಯನ್ನು ಪರಿಚಯಿಸಲಾಯಿತು. ಈ ಹಿಂದೆ ಅಭ್ಯರ್ಥಿಗಳು ಪ್ರತಿ ವಿಶ್ವವಿದ್ಯಾಲಯಕ್ಕೂ ಪ್ರತ್ಯೇಕ ಪ್ರವೇಶ ಪರೀಕ್ಷೆಗಳನ್ನು ಬರೆಯಬೇಕಾಗಿತ್ತು. ಇದು ಅಭ್ಯರ್ಥಿಗಳ ಮೇಲೆ ಭಾರಿ ಆರ್ಥಿಕ ಹೊರೆಯನ್ನು ಉಂಟು ಮಾಡುತ್ತಿತ್ತು. ಆದರೆ CUET-UG ಅದನ್ನು ತೆಗೆದುಹಾಕಿ ಕೇವಲ ಒಂದು ಪರೀಕ್ಷೆಗೆ ಸೀಮಿತಗೊಳಿಸಿದೆ.

ಈಗ ಅಭ್ಯರ್ಥಿಗಳು CUET-UG ಪರೀಕ್ಷೆ ಬರೆಯುತ್ತಾರೆ ಮತ್ತು ಅವರು ಪಡೆದ ಅಂಕಗಳ ಆಧಾರದ ಮೇಲೆ ಅವರಿಗೆ ವಿಶ್ವವಿದ್ಯಾಲಯಗಳನ್ನು ನೀಡಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಕಾರ ಸಿಯುಇಟಿ- ಯುಜಿ ಅಭ್ಯರ್ಥಿಗಳನ್ನು ಭಾಷಾ ಕೌಶಲ್ಯ, ಕ್ಷೇತ್ರ, ನಿರ್ದಿಷ್ಟ ವಿಷಯಗಳು ಮತ್ತು ಸಾಮಾನ್ಯ ಯೋಗ್ಯತೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತದೆ. 2024ರಲ್ಲಿ ಸುಮಾರು 13.47 ಲಕ್ಷ ಅಭ್ಯರ್ಥಿಗಳು ಈ ಪ್ರವೇಶ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು ಆದರೆ 2023ರಲ್ಲಿ ಈ ಸಂಖ್ಯೆ 14.99 ಲಕ್ಷವಾಗಿತ್ತು.

ಕಳೆದ ವರ್ಷ ಈ ಪ್ರವೇಶ ಪರೀಕ್ಷೆಯನ್ನು ಮೇ 15 ರಿಂದ 29 ರವರೆಗೆ ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗಿತ್ತು. ಇದು ಆನ್ಲೈನ್ ಮತ್ತು ಆಫ್ಲೈನ್ ಪರೀಕ್ಷೆಗಳಿಗೆ ಅವಕಾಶ ನೀಡಿತ್ತು. ಅಭ್ಯರ್ಥಿಗಳಲ್ಲಿ 7.17 ಲಕ್ಷ ಹುಡುಗರು ಮತ್ತು 6.30 ಲಕ್ಷ ವಿದ್ಯಾರ್ಥಿನಿಯರು ಮತ್ತು 7 ಟ್ರಾನ್ಸ್ ಜೆಂಡರ್ ಗಳು ಸೇರಿದ್ದಾರೆ. ಒಟ್ಟು 379 ನಗರಗಳನ್ನು ಪರೀಕ್ಷೆಗೆ ನಿಗದಿಪಡಿಸಲಾಗಿತ್ತು. ಈ ವರ್ಷ ದೇಶಾದ್ಯಂತ 287 ವಿಶ್ವವಿದ್ಯಾನಿಲಯಗಳು ಈ ಪ್ರವೇಶ  ಪರೀಕ್ಷೆಯಲ್ಲಿ ಭಾಗಿಯಾಗಲಿವೆ. ಅಂದರೆ ಈ 287 ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಿಯುಇಟಿ-ಯುಜಿ ಪರೀಕ್ಷೆಯನ್ನು ಬರೆಯಲೇಬೇಕಾಗುತ್ತದೆ.

Post a Comment

0 Comments