ನಕಲಿ ಅಭ್ಯರ್ಥಿಗಳ ಪತ್ತೆಗೆ 'ಎಐ' ಅಸ್ತ್ರ ಪ್ರಯೋಗ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ (ಕೆಇಎ) ಮಹತ್ವದ ಕ್ರಮ ಕೈಗೊಂಡಿದ್ದು, ನಕಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವುದನ್ನು ತಡೆಯುವ ಉದ್ದೇಶದಿಂದ ಮೊದಲ ಬಾರಿಗೆ ಎಐ ತಾಂತ್ರಿಕತೆಯ ಮೊಬೈಲ್ ಆಧಾರಿತ ಅಭ್ಯರ್ಥಿ ದೃಢೀಕರಣ ವ್ಯವಸ್ಥೆಯನ್ನು ವಿಧಾನ ಪರಿಷತ್ತಿನ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಬಳಕೆ ಮಾಡಿದೆ.
ಪ್ರಾಧಿಕಾರದ ಇಂಜಿನಿಯರಿಂಗ್ ತಂಡ ಮೊಬೈಲ್ ಬೇಸ್ಡ್ ಕ್ಯಾಂಡಿಡೇಟ್ ಅತಂಟಿಕೇಶನ್ ವ್ಯವಸ್ಥೆಯನ್ನು ತಪಡಿಸುತ್ತಿದೆ ಕಂಪ್ಯೂಟರ್ ಆಪರೇಟರ್ ಮತ್ತು ಇತರ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಪ್ರಯೋಗಾರ್ಥವಾಗಿ ಇದನ್ನು ಬಳಕೆ ಮಾಡಲಾಗಿದ್ದು , ಮೊದಲ ಪ್ರಯತ್ನ ಯಶಸ್ವಿಯಾಗಿದೆ ಎಂದು ಕೆಇಎ ತಿಳಿಸಿದೆ. 

ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವಾಗ ಸ್ಮಾರ್ಟ್ಫೋನ್ ಬಳಕೆ ಮಾಡಿಕೊಂಡು ಅವರ ಫೋಟೋ ಸರಿ ಹಿಡಿಯಲಾಗುತ್ತದೆ. ಇದು ಕೂಡಲೇ ಪ್ರಾಧಿಕಾರದ ಡೇಟಾ ಸರ್ವರ್ ನೊಂದಿಗೆ ಸಂಪರ್ಕಗೊಂಡು ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡಿರುವ ಭಾವಚಿತ್ರದೊಂದಿಗೆ ತಾಳೆ ಮಾಡಿ ನೈಜತೆ ದೃಢಪಡಿಸುತ್ತದೆ. ಮುಂದಿನ ಪರೀಕ್ಷೆಗಳಲ್ಲಿಯೂ ಇದನ್ನು ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.

Post a Comment

0 Comments