ದೇಶಾದ್ಯಂತ ಕೋಟ್ಯಂತರ ಗ್ರಾಹಕರು ಎಟಿಎಂ ಕಾರ್ಡುಗಳನ್ನು ಬಳಸುತ್ತಿದ್ದು ಈಗ ಎಲ್ಲರಿಗೂ ಶುಲ್ಕ ಹೆಚ್ಚಳದ ಬಗ್ಗೆ ತಲೆನೋವು ಶುರುವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ ವ್ಯವಹಾರದ ಕುರಿತು ಮುಖ್ಯ ತೀರ್ಮಾನಗಳನ್ನು ತೆಗೆದುಕೊಂಡಿದ್ದು ಗ್ರಾಹಕರು ಹೆಚ್ಚುವರಿ ಶುಲ್ಕ ಪಾವತಿಸಬೇಕು. ಈ ಶುಲ್ಕ ಹೆಚ್ಚಳದಿಂದ ಎಟಿಎಂ ನೆಟ್ವರ್ಕ್ ಗಳನ್ನು ಕಡಿಮೆ ಹೊಂದಿರುವ ಸಣ್ಣ ಬ್ಯಾಂಕುಗಳಿಗೆ ನಷ್ಟ ಉಂಟಾಗಾಲಿದೆ.
ಗ್ರಾಹಕರು ಹಣಕಾಸು ವ್ಯವಹಾರಕ್ಕಾಗಿ ಎಟಿಎಂ ಬಳಕೆ ಮಾಡಿದರೆ ಅಂದರೆ ಹಣ ತೆಗೆಯಲು ಎಟಿಎಂ ಬಳಸುವುದಾದಲ್ಲಿ ಅದರ ಶುಲ್ಕ ಎರಡು ರೂಪಾಯಿ ಏರಿಕೆಯಾಗಲಿದೆ. ಅಂದರೆ ಹಣ ತೆಗೆಯಲು ಟ್ರಾನ್ಸ್ಯಾಕ್ಷನ್ ಚಾರ್ಜ್ 17 ರೂಪಾಯಿಯಿಂದ 19 ರೂಪಾಯಿಗೆ ಹೆಚ್ಚಳವಾಗಲಿದೆ. ಇತರ ಸೇವೆಗಳಾದ ಬ್ಯಾಲೆನ್ಸ್ ಚೆಕ್ ಅಥವಾ ಇತರ ಸೇವೆಗಳಿಗೆ ಸೇವಾ ಶುಲ್ಕ 6 ರೂಪಾಯಿಯಿಂದ 7 ರುಪಾಯಿಗೆ ಹೆಚ್ಚಳವಾಗಲಿದೆ. ಈ ಬದಲಾವಣೆ ಮೇ 1ರಿಂದಲೇ ಅನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ
0 Comments