ಐಸ್ ಕ್ರೀಮ್ ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಪ್ರಸ್ತುತ ಸಾವಿರಾರು ಕಂಪನಿಗಳು ನಾನಾ ಬಗೆಯ ಐಸ್ ಕ್ರೀಮ್ ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಆದರೆ ಈ ಐಸ್ ಕ್ರೀಮ್ ಗಳು ಅದೆಷ್ಟು ಸುರಕ್ಷಿತ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿರುವುದು ಸಹಜವೇ. ಐಸ್ ಕ್ರೀಮ್ ತಯಾರಿಸುವ ಘಟಕಗಳಲ್ಲಿ ಸ್ವಚ್ಛತೆ ಇರುವುದಿಲ್ಲ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಇದರಿಂದ ಕಲುಷಿತ ಪದಾರ್ಥಗಳು ಐಸ್ ಕ್ರೀಮ್ ಜೊತೆ ಸೇರಿ ಮನುಷ್ಯನ ದೇಹಕ್ಕೆ ಹಾನಿಯನ್ನುಂಟು ಮಾಡಿ ಅನಾರೋಗ್ಯಕ್ಕೆ ಕಾರಣವಾಗುವ ಸಾಧ್ಯತೆ ಬಹಳಷ್ಟಿದೆ. ಅಲ್ಲದೆ ಐಸ್ ಕ್ರೀಮ್ ಗಳಲ್ಲಿ ಕೃತಕ ಕಲರ್ ಬಳಕೆ ಹಾಗೂ ಕೃತಕ ಸಿಹಿಕಾರಕಗಳನ್ನು ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಐಸ್ ಕ್ರೀಮ್ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ ನಡೆಸುತ್ತಿದ್ದು ಮಾದರಿಗಳನ್ನು ಸಂಗ್ರಹಿಸುತ್ತಿದೆ.
ಐಸ್ ಕ್ರೀಮ್ ಗಳಲ್ಲಿ ಬಳಸುವಂತಹ ಕೃತಕ ಸಿಹಿಕಾರಕ ಪದಾರ್ಥಗಳಲ್ಲಿ ಆಸ್ಪರ್ಟೇಮ್, ಅಸೆಸಲ್ಫೇಮ್ ಪೊಟ್ಯಾಶಿಯಂ ನಿಂದ ತಯಾರಾಗುವಂತಹ ಐಸ್ ಕ್ರೀಮ್ ಗಳನ್ನು ಅತಿಯಾಗಿ ಸೇವನೆ ಮಾಡಿದ್ದಲ್ಲಿ ಹುಚ್ಚು ಕ್ಯಾನ್ಸರ್ ಸೇರಿದಂತೆ ಹಲವಾರು ಕಾಯಿಲೆಗಳು ಮನುಷ್ಯನ ದೇಹವನ್ನು ಬಾಧಿಸುತ್ತದೆ.
ಬೇಸಿಗೆ ಕಾಲದಲ್ಲಿ ಗ್ರಾಹಕರಿಂದ ಐಸ್ ಕ್ರೀಮಿಗೆ ಬಹು ಬೇಡಿಕೆ ಹೆಚ್ಚಾಗುತ್ತಿದ್ದು ತಯಾರಕರು ಕೃತಕ ಬಣ್ಣ ಮತ್ತು ಟೆಸ್ಟಿಂಗ್ ಪೌಡರ್ ಬಳಕೆ ಮಾಡಿ ಐಸ್ ಕ್ರೀಮ್ ತಯಾರು ಮಾಡುತ್ತಾರೆ. ಇದು ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುತ್ತದೆ.
ಈ ದೃಷ್ಟಿಯಿಂದ ಆಹಾರ ಇಲಾಖೆಯು ರಾಜ್ಯದ್ಯಂತ ವಿವಿಧ ಭಾಗಗಳಲ್ಲಿನ ಐಸ್ ಕ್ರೀಮ್ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸುತ್ತಿದ್ದು ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಅಷ್ಟೇ ಅಲ್ಲದೆ ಐಸ್ ಕ್ರೀಮ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ. ಮುಂದಿನ ವಾರ ಟಿ ಐಸ್ ಕ್ರೀಮ್ ಮಾದರಿ ವರದಿ ಬರಲಿದ್ದು ಅದರ ಆಧಾರದ ಮೇಲೆ ಆಹಾರ ಇಲಾಖೆಯು ಕ್ರಮಕ್ಕೆ ಮುಂದಾಗಲಿದೆ. ಐಸ್ ಕ್ರೀಮ್ ಪ್ರಿಯರು ಬಾಯಿ ಚಪ್ಪರಿಕೆಗಾಗಿ ಪದೇ ಪದೇ ತಿನ್ನುವ ಮೊದಲು 10 ಬಾರಿ ಯೋಚಿಸುವುದು ಉತ್ತಮ ಎಂಬುದು ಆಹಾರ ತಜ್ಞರ ಅಭಿಪ್ರಾಯವಾಗಿದೆ.
0 Comments